Select Your Language

Notifications

webdunia
webdunia
webdunia
webdunia

ಕಾಂಗ್ರೆಸ್‌ಗೆ ತಿರುಗೇಟು ನೀಡುವ ಶಕ್ತಿಯಿದೆ: ಬಿಜೆಪಿಗೆ ಮೊಯ್ಲಿ ವಾರ್ನಿಂಗ್

ವೀರಪ್ಪಾ ಮೊಯ್ಲಿ
ಚೆನ್ನೈ , ಶನಿವಾರ, 21 ಮೇ 2016 (15:45 IST)
ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲನುಭವಿಸಿರಬಹುದು. ಆದರೆ, ಸೂಕ್ತ ಸಮಯದಲ್ಲಿ ತಿರುಗೇಟು ನೀಡಲಿದೆ ಎಂದು ಕಾಂಗ್ರೆಸ್ ಮುಖಂಡ ವೀರಪ್ಪಾ ಮೊಯ್ಲಿ ಹೇಳಿದ್ದಾರೆ.
 
ವಿಧಾನಸಭೆ ಚುನಾವಣೆಗಳ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪಕ್ಷದ ಅಂತರಿಕ ವಲಯದಲ್ಲಿ ಕೆಲ ಬದಲಾವಣೆಗಳ ಬಗ್ಗೆ ಆಸಕ್ತಿ ತೋರಿದ್ದು, ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಯಾವ ಸಮಯದಲ್ಲಿ ತಿರುಗೇಟು ನೀಡಬೇಕು ಎನ್ನುವುದು ಖಚಿತವಾಗಿ ಗೊತ್ತಿದೆ ಎಂದಿದ್ದಾರೆ.
 
ರಾಜಕೀಯದಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ. ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಹೊರಬಂದು ನಂತರ ನಡೆದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ನಿದರ್ಶನಗಳಿವೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
 
ಪುದುಚೇರಿಯಲ್ಲಿ ಜಯಗಳಿಸಿದ್ದೇವೆ ಎಲ್ಲಾ ರಾಜ್ಯಗಳಲ್ಲೂ ಎರಡಂಕಿಯ ಸೀಟುಗಳನ್ನು ಗೆದ್ದಿದ್ದೇವೆ. ಆಸ್ಸಾಂ ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರ ನಡೆಸಿರುವುದನ್ನು ಬಿಜೆಪಿ ಮರೆಯಬಾರದು ಎಂದು ಲೇವಡಿ ಮಾಡಿದ್ದಾರೆ.
 
ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪಕ್ಷದಲ್ಲಿ ಮೇಜರ್ ಸರ್ಜರಿ ಅಗತ್ಯವಿದೆ ಎಂದು ಹೇಳಿಕೆ ನೀಡಿದ ನಂತರ ಮೊಯ್ಲಿ ಹೇಳಿಕೆ ಹೊರಬಿದ್ದಿದೆ.  
 
ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡಾ, ಸೋಲಿನ ಪರಾಮರ್ಶೆಗಿಂತ ಕಠಿಣ ಕ್ರಮದ ಅಗತ್ಯವಿದೆ ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಕೋರಿದ್ದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂಬೆಳಿಗೆ ಬೆಗ್ಗರ್ಸ್ ಕಾಲೋನಿಯಲ್ಲಿ ಸಚಿವ ಎಚ್‌.ಆಂಜನೇಯ