Webdunia - Bharat's app for daily news and videos

Install App

ಸ್ವಾಮೀಜಿ ಸುದ್ದಿಗೆ ಬಂದ್ರೆ ಮಸೀದಿಗೆ ನುಗ್ಗಿ ಹೊಡೆಯುತ್ತೇವೆ: ಶಾಸಕ ನಿತೇಶ್ ಕುಮಾರ್ ವಿರುದ್ಧ ದೂರು ದಾಖಲು

Sampriya
ಸೋಮವಾರ, 2 ಸೆಪ್ಟಂಬರ್ 2024 (19:48 IST)
Photo Courtesy X
ಮುಂಬೈ: ಮಸೀದಿಗೆ ನುಗ್ಗು ಹೊಡೆಯುತ್ತೇವೆ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕ ನಿತೇಶ್ ಕುಮಾರ್ ರಾಣೆ ವಿರುದ್ಧ ದೂರು ದಾಖಲಾಗಿದೆ.

 ಅಹಮ್ಮದ್‌ನಗರ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಾಂತ ರಾಮಗಿರಿ ಮಹಾರಾಜ್ ಪರವಾಗಿ ಶ್ರೀರಾಮಪುರ ಮತ್ತು ಟೋಪಖಾನಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ರಾಣೆ, ಸ್ವಾಮೀಜಿ ರಾಮಗಿರಿ ಮಹಾರಾಜ್ ವಿರುದ್ಧವಾಗಿ ಯಾರಾದರೂ ಏನಾದರು ಹೇಳಿಕೆ ನೀಡಿದ್ದಲ್ಲಿ ನಾವು ಮಸೀದಿ ನುಗ್ಗಿ ಒಬ್ಬೊಬ್ಬರನ್ನೇ ಹಿಡಿದು ಥಳಿಸುತ್ತೇವೆ.  ಇದನ್ನು ಮನಸಿನಲ್ಲಿಟ್ಟುಕೊಳ್ಳಿ ಎಂದು ರಾಣೆ ಹೇಳಿದ್ದಾರೆನ್ನಲಾದ ವಿಡಿಯೊ ವೈರಲ್ ಆಗಿತ್ತು.


ಈ ಸಂಬಂಧ ಶ್ರೀರಾಮಪುರ ಮತ್ತು ಟೋಪಖಾನಾ ಪೊಲೀಸ್ ಠಾಣೆಯಲ್ಲಿ ರಾಣೆ ವಿರುದ್ಧ ಎರಡು ಎಫ್‌ಐಆರ್ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಎಐಎಂಐಎಂ ವಕ್ತಾರ ವಾರಿಸ್ ಪಠಾಣ್, ರಾಣೆಯನ್ನು ಬಂಧಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಒತ್ತಾಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕ ಈ ಭಾಗಗಳಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ

ತಾನು ಸತ್ತು ಮನೆಯ ಮಾಲಿಕರನ್ನು ರಕ್ಷಿಸಿದ ಸಾಹಸಿ ನಾಯಿ: ಕೊನೆಯ ಕ್ಷಣದ Video

ಬರಪೀಡಿತ ರೈತರಿಗೆ ಸರ್ಕಾರ ತಕ್ಷಣ 10 ಸಾವಿರ ಕೋಟಿ ರೂ ನೀಡಬೇಕು: ವಿಜಯೇಂದ್ರ

ಯಾರಿಗೂ ಅಸಮಾಧಾನವಿಲ್ಲ, ಯಾರೂ ರಾಜೀನಾಮೆ ನೀಡಲ್ಲ ಎಂದ ಬಿಕೆ ಹರಿಪ್ರಸಾದ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments