ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

Sampriya
ಶನಿವಾರ, 15 ನವೆಂಬರ್ 2025 (18:10 IST)
Photo Credit X
2025ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 25 ಸ್ಥಾನಗಳನ್ನು ಗಳಿಸುವ ಮೂಲಕ ಪಕ್ಷವು ಭಾರಿ ಹಿನ್ನಡೆ ಅನುಭವಿಸಿದ ಒಂದು ದಿನದ ನಂತರ, ರಾಷ್ಟ್ರೀಯ ಜನತಾ ದಳದ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯ ತ್ಯಜಿಸುವುದಾಗಿ ಹಾಗೂ ಕುಟುಂಬವನ್ನು ತ್ಯಜಿಸುವುದಾಗಿ  ಘೋಷಣೆ ಮಾಡಿದ್ದಾರೆ. 

‘ನಾನು ರಾಜಕೀಯ ಮತ್ತು ನನ್ನ ಕುಟುಂಬವನ್ನು ತ್ಯಜಿಸುತ್ತಿದ್ದೇನೆ. ತೇಜಸ್ವಿ ಅವರ ಆಪ್ತರಾದ ಸಂಜಯ್‌ ಯಾದವ್ ಮತ್ತು ರಮೀಜ್ ಅವರು ನನ್ನನ್ನು ಕೇಳಿಕೊಂಡಿದ್ದು ಇದನ್ನೇ. ನಾನೇ ಎಲ್ಲಾ ಆಪಾದನೆಗಳನ್ನು ಹೊರುತ್ತಿದ್ದೇನೆ’ ಎಂದು ರೋಹಿಣಿ ಆಚಾರ್ಯ ಅವರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. 

  2025 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) 25 ಸ್ಥಾನಗಳನ್ನು ಗೆದ್ದು, ಭಾರೀ ಹಿನ್ನಡೆಯನ್ನು ಅನುಭವಿಸಿತು. 

ರೋಹಿಣಿ ಆಚಾರ್ಯ ಯಾರು?

ರೋಹಿಣಿ ಆಚಾರ್ಯ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಮಗಳು ಮತ್ತು ತೇಜಸ್ವಿ ಯಾದವ್ ಅವರ ಸಹೋದರಿ. ಆಕೆ ಎಂಬಿಬಿಎಸ್ ಪದವಿದರೆಯಾಗಿದ್ದು, ಆಕೆಯ ಸಂಗಾತಿ ಸಮ್ರೇಶ್ ಸಿಂಗ್ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ - ಲಾಲು ಪ್ರಸಾದ್ ಯಾದವ್ ಅವರ ಸ್ನೇಹಿತ ನಿವೃತ್ತ ಆದಾಯ ತೆರಿಗೆ ಅಧಿಕಾರಿ ರೈ ರಣವಿಜಯ್ ಸಿಂಗ್ ಅವರ ಮಗ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ ಗಾಂಧಿ ದೇಶದ ಪ್ರೇಮದ, ಧೈರ್ಯದ ಪ್ರತೀಕ: ಡಿಕೆ ಶಿವಕುಮಾರ್

ಪಿಎಂ ಕಿಸಾನ್ ಸಮ್ಮಾನ್ ಯೋಜನೆ 21 ನೇ ಕಂತು ಬಿಡುಗಡೆ: ಇಂದೇ ಖಾತೆ ಚೆಕ್ ಮಾಡಿ

ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನ ಜೀವರಕ್ಷಕ ಔಷಧಿ ಟೆಂಡರ್ ನಲ್ಲಿ ಗೋಲ್ಮಾಲ್: ಸಿ.ಟಿ.ರವಿ

ಇಂದಿರಾ ಗಾಂಧಿ ಪುಸ್ತಕ 100 ರೂ ಕೊಟ್ಟು ತಗೊಂಡು ಹೋಗಿ: ಡಿಕೆ ಶಿವಕುಮಾರ್ ತಾಕೀತು

ಭ್ರಷ್ಟ, ಜನ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟಕ್ಕೆ ನಿರ್ಧಾರ

ಮುಂದಿನ ಸುದ್ದಿ
Show comments