ಲಕ್ನೋ: ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್ ರ ಗೋವುಗಳ ಮೇಲಿನ ಪ್ರೀತಿ ಈಗಾಗಲೇ ಜಾಹೀರಾಗಿದೆ. ಆದರೆ ಅವರಿಂದು ವಿಪಕ್ಷ ನಾಯಕ ಮುಲಾಯಂ ಸಿಂಗ್ ಯಾದವ್ ಪುತ್ರನ ದನದ ದೊಡ್ಡಿಗೆ ಭೇಟಿ ನೀಡುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಮೊನ್ನೆಯಷ್ಟೇ ಮುಲಾಯಂ ಪುತ್ರ ಪ್ರತೀಕ್ ಯಾದವ್ ಮತ್ತು ಪತ್ನಿ ಅಪರ್ಣಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಇದೀಗ ಸ್ವತಃ ಸಿಎಂ ಅವರೇ ಪ್ರತೀಕ್ ಮಾಲಿಕತ್ವದ ಗೋವು ಮತ್ತು ಇತರ ಪ್ರಾಣಿಗಳ ರಕ್ಷಣಾಲಯಕ್ಕೆ ಭೇಟಿ ಕೊಡಲಿದ್ದಾರಂತೆ.
ಬಹುಶಃ ಕಳೆದ ಭೇಟಿಯ ಸಂದರ್ಭದಲ್ಲಿ ಪ್ರತೀಕ್ ದಂಪತಿ ಹಾಗೂ ಸಿಎಂ ಯೋಗಿ ನಡುವೆ ಗೋವುಗಳ ರಕ್ಷಣೆ ಬಗ್ಗೆ ಮಾತುಕತೆ ನಡೆದಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ, ಇವರಿಬ್ಬರ ಈ ಸ್ನೇಹ ಪ್ರತೀಕ್ ಬಿಜೆಪಿ ಸೇರುತ್ತಾರೆಂಬ ಸುದ್ದಿಗೆ ರೆಕ್ಕೆ ಪುಕ್ಕ ಹುಟ್ಟುವಂತಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ