Publish Date: Fri, 21 Apr 2017 (07:26 IST)
Updated Date: Fri, 21 Apr 2017 (07:28 IST)
ಲಕ್ನೊ: ಹೆಸರಿಗೆ ಜೈಲು ವಾಸ. ಆದರೆ ಮಾಡುವುದು ಐಷಾರಾಮಿ ಜೀವನ ಎನ್ನುತ್ತಿದ್ದ ವಿಐಪಿ ಕುಳಗಳಿಗೆಲ್ಲಾ ತಕ್ಕ ಪಾಠ ಕಲಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಮುಂದಾಗಿದ್ದಾರೆ.
ಇನ್ನು ಮುಂದೆ ಜೈಲಿನಲ್ಲಿರುವ ಭಾರೀ ಕುಳಗಳಿಗೆ ಸಾಮಾನ್ಯ ಖೈದಿಗಳಿಗೆ ನೀಡುತ್ತಿರುವ ಸಾಮಾನ್ಯ ಊಟವನ್ನೇ ನೀಡಿ. ವಿಐಪಿ ಟ್ರೀಟ್ ಮೆಂಟ್ ಯಾರಿಗೂ ಕೊಡುವುದು ಬೇಡ ಎಂದು ರಾಜ್ಯದ ಎಲ್ಲಾ ಬಂದೀಖಾನೆಗಳ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಕೆಲವು ಜೈಲುಗಳಲ್ಲಿ ವಿಐಪಿ ಖೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಆರೋಪಗಳು ಬಂದ ಹಿನ್ನಲೆಯಲ್ಲಿ ಸಿಎಂ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೆ ಜೈಲು ವಾಸ ತಪ್ಪಿಸಲು ಅನಾರೋಗ್ಯದ ನೆಪ ಹೇಳುವ ಖೈದಿಗಳಿಗೂ ಕರುಣೆ ತೋರುವುದು ಬೇಡ ಎಂದು ಖಡಕ್ಕಾಗಿ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ