Select Your Language

Notifications

webdunia
webdunia
webdunia
webdunia

ಬಿಹಾರ್‌ನಲ್ಲಿ ವಿಶ್ವಾಸಮತ ಗೆದ್ದ ಸಿಎಂ ನಿತೀಶ್ ಕುಮಾರ್

ಬಿಹಾರ್‌ನಲ್ಲಿ ವಿಶ್ವಾಸಮತ ಗೆದ್ದ  ಸಿಎಂ ನಿತೀಶ್ ಕುಮಾರ್
ಪಾಟ್ನಾ , ಶುಕ್ರವಾರ, 28 ಜುಲೈ 2017 (13:13 IST)
ಬಿಹಾರ್ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಯಗಳಿಸಿದ್ದಾರೆ.
 
ಸದನದಲ್ಲಿ ಧ್ವನಿಮತದ ಮೂಲಕ ನಡೆದ ಮತಯಾಚನೆಯಲ್ಲಿ ನಿತೀಶ್ ಕುಮಾರ್ ಪರವಾಗಿ 131 ಸದಸ್ಯರು ಮತಚಲಾಯಿಸಿದ್ದಾರೆ. ಆರ್‌ಜೆಡಿ ಮೈತ್ರಿಕೂಟದ ಪರವಾಗಿ 108 ಮತಗಳು ಬಂದಿವೆ.
 
ಇನ್ನು ಕೆಲವೇ ಕ್ಷಣಗಳಲ್ಲಿ ಸಿಎಂ ನಿತೀಶ್ ಕುಮಾರ್ ಸಚಿವ ಸಂಪುಟ ವಿಸ್ತರಣೆ ಮಾಡಲಿದ್ದು ಬಿಜೆಪಿಯ 14 ಶಾಸಕರು ಮತ್ತು ಜೆಡಿಯು ಪಕ್ಷದ 14 ಶಾಸಕರು ಸಚಿವರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ರಾಜ್ಯ ರಾಜಕೀಯದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಕೇವಲ 15 ಗಂಟೆಯೊಳಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಪ್ರಧಾನಿ ನವಾಜ್ ದೋಷಿ, ಪಿಎಂ ಹುದ್ದೆಯಿಂದ ವಜಾ: ಸುಪ್ರೀಂಕೋರ್ಟ್