ಯುವತಿ ಮೇಲೆ ಗ್ಯಾಂಗ್‌ರೇಪ್‌ ಬೆನ್ನಲ್ಲೇ ಮಹಿಳೆಯರ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ

Sampriya
ಭಾನುವಾರ, 12 ಅಕ್ಟೋಬರ್ 2025 (17:11 IST)
ಕೋಲ್ಕತ್ತ: ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್‌ರೇಪ್‌ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಗೆಗೆ ದೇಶದಾದ್ಯಂತ ಖಂಡನೆ ವ್ಯಕ್ತವಾಗಿದೆ.

ಪಶ್ಚಿಮ ಬರ್ದ್‌ಮಾನ್‌ ಜಿಲ್ಲೆಯ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲಿನ ರೇಪ್‌ ಪ್ರಕರಣವನ್ನು ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ಆದರೆ, ಯುವತಿಯರು ರಾತ್ರಿ ಹೊತ್ತು ಹೊರಗೆ ಹೋಗಬಾರದು. ಇದ್ದಲ್ಲೇ ಇದ್ದು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿಕೆ ನೀಡಿರುವುದು ಈಗ ವಿವಾದಕ್ಕೀಡಾಗಿದೆ.

ಅದು ಖಾಸಗಿ ಕಾಲೇಜು. ಆ ಯುವತಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಮಧ್ಯರಾತ್ರಿ 12.30ಕ್ಕೆ ಅವಳು ಹೇಗೆ ಹೊರಬಂದಳು? ನನಗೆ ತಿಳಿದಿರುವಂತೆ, ಘಟನೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಏನಾಯಿತು ಎಂದು ನನಗೆ ತಿಳಿದಿಲ್ಲ. ತನಿಖೆ ನಡೆಯುತ್ತಿದೆ. ಘಟನೆಯನ್ನು ನೋಡಿ ನನಗೆ ಆಘಾತವಾಗಿದೆ. ಆದರೆ, ಖಾಸಗಿ ವೈದ್ಯಕೀಯ ಕಾಲೇಜುಗಳು ಸಹ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಯಾರನ್ನೂ ಕ್ಷಮಿಸುವುದಿಲ್ಲ... ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆ ವಿಧಿಸುತ್ತೇವೆ ಎಂದು ಎಚ್ಚರಿಸಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಭವನಗಳಿಗೆ 67 ಕೋಟಿ, ಹಿಂದೂಗಳಿಗೆ ದುಡ್ಡಿಲ್ಲ: ಹಿಂದೂಗಳು ವೋಟ್ ಹಾಕಿಲ್ವಾ ಎಂದ ಅಶೋಕ್

ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚು ಬಾರಿ ನಡೆದಿತ್ತು ಮತಪಟ್ಟಿ ಪರಿಷ್ಕರಣೆ: ಹಾಗಿದ್ದರೂ ಈಗ ವಿರೋಧ ಯಾಕೆ

ನಿತೀಶ್ ಕುಮಾರ್ ಪದೇ ಪದೇ ಮೋದಿ ಕಾಲಿಗೆ ಬೀಳೋದ್ಯಾಕೆ: ವಿಡಿಯೋ ನೋಡಿ ಕೆಲವರಿಗೆ ಉರಿ

ಬೆಂಗಳೂರು ದರೋಡೆ ಪ್ರಕರಣ: ಪೊಲೀಸರ ಕಣ್ತಪ್ಪಿಸಲು ಕಳ್ಳರ ಖತರ್ನಾಕ್ ಪ್ಲ್ಯಾನ್ ಬಹಿರಂಗ

ಬಾಹ್ಯಾಕಾಶದಿಂದ ಬರೋದು ಸುಲಭ: ಪ್ರಿಯಾಂಕ್ ಖರ್ಗೆ ಎದುರದಲ್ಲೇ ಬೆಂಗಳೂರು ರಸ್ತೆ ಕಿಚಾಯಸಿದ ಶುಭಾಂಶು ಶುಕ್ಲ

ಮುಂದಿನ ಸುದ್ದಿ
Show comments