ನವದೆಹಲಿ : ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಮಗಳು ಹರ್ಷಿತಾ ಕ್ರೇಜಿವಾಲ್ ವೆಬ್ ಪೋರ್ಟಲ್ ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಸೆಟ್ ಮಾರಾಟ ಮಾಡಲು ಹೋಗಿ 34 ಸಾವಿರ ರೂ. ಕಳೆದುಕೊಂಡ ಘಟನೆ ನಡೆದಿದೆ.
ವೆಬ್ ಪೋರ್ಟಲ್ ನಲ್ಲಿ ಆರೋಪಿ ಹರ್ಷಿತಾ ಮಾರಾಟಕ್ಕಿಟ್ಟ ಸೋಫಾ ಸೆಟ್ ಖರೀದಿಸಲು ಮುಂದಾದ. ಬಳಿಕ ಅವರ ಬ್ಯಾಂಕ್ ಖಾತೆಯನ್ನು ಪರಿಶೀಲಿಸುವ ಸಲುವಾಗಿ ಸ್ವಲ್ಪ ಹಣವನ್ನು ಅವರ ಖಾತೆಗೆ ಕಳುಹಿಸಿದ. ಬಳಿಕ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಅವರ ಖಾತೆಯಿಂದ 34ಸಾವಿರ ರೂಗಳನ್ನು ಲೂಟಿ ಮಾಡಿದ್ದಾನೆ.
ಈ ಬಗ್ಗೆ ಹರ್ಷಿತಾ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.