Webdunia - Bharat's app for daily news and videos

Install App

ವಯನಾಡಿನ ಹಾಗೇ ಹಿಮಾಚಲ ಪ್ರದೇಶದಲ್ಲೂ ಭಾರೀ ದುರಂತ: ಇಬ್ಬರು ಸಾವು, 50 ಮಂದಿ ನಾಪತ್ತೆ

Sampriya
ಗುರುವಾರ, 1 ಆಗಸ್ಟ್ 2024 (18:59 IST)
Photo Courtesy X
ಹಿಮಾಚಲ ಪ್ರದೇಶ: ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಸುರಿದ ಭಾರೀ ಮಳೆಗೆ ಶಿಮ್ಲಾ, ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಮೇಘಸ್ಫೋಟವಾಗಿ ಇಬ್ಬರು ಸಾವನ್ನಪ್ಪಿದ್ದು, 50 ಮಂದಿ ಕಾಣೆಯಾಗಿದ್ದಾರೆ. ರಾತ್ರಿಯ ಧಾರಾಕಾರ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ.

ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಪ್ರತಿಕ್ರಿಯಿಸಿ, ಇಲ್ಲಿಯವರೆಗೆ ಎರಡು ಮೃತ ದೇಹಗಳನ್ನು ಪತ್ತೆಯಾಗಿದ್ದು, 50 ಜನರು ಇನ್ನೂ ಕಾಣೆಯಾಗಿದ್ದಾರೆ ಮತ್ತು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ನಾವು ಸೇನೆ ಮತ್ತು ವಾಯುಪಡೆಯಿಂದ ಸಹಾಯ ಕೋರಿದ್ದೇವೆ. ರಾಜ್ಯಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದರು.

ಮುಂದಿನ 36 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಇದೀಗ ಉಕ್ಕಿ ಹರಿಯುತ್ತಿರುವ ನದಿಗಳಿಂದ ದೂರ ಉಳಿಯುವಂತೆ ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಸುಖು ಸೇರಿಸಲಾಗಿದೆ.

ರಾಂಪುರ (ಶಿಮ್ಲಾ)ದ ಸಮೇಶ್ ಗ್ರಾಮದಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 28 ಮಂದಿ ನಾಪತ್ತೆಯಾಗಿದ್ದಾರೆ ಎಂದು ಶಿಮ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂಜೀವ್ ಕುಮಾರ್ ಗಾಂಧಿ ಪಿಟಿಐಗೆ ತಿಳಿಸಿದ್ದಾರೆ. ಸ್ಥಳದಿಂದ ಇಬ್ಬರನ್ನು ರಕ್ಷಿಸಲಾಗಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rahul Gandhi: ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ಕೊಟ್ರಾ ರಾಹುಲ್ ಗಾಂಧಿ: ಲೆಹರ್ ಸಿಂಗ್ ಟ್ವೀಟ್ ನಲ್ಲಿ ಏನಿದೆ ನೋಡಿ

ರಕ್ತದ ಮಡುವಿನಲ್ಲಿ ನಿವೃತ್ತ ಪೊಲೀಸ್ ಓಂ ಪ್ರಕಾಶ್‌ ಮೃತದೇಹ ಪತ್ತೆ, ಮನೆಯವರೇ ಮೇಲೆ ಡೌಟ್‌

ಸಿಎಂ ಕುರ್ಚಿ ಗುದ್ದಾಟದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

Video vira: ವಿದ್ಯುತ್ ಶಾಕ್‌ನಿಂದ ಒದ್ದಾಟುತ್ತಿದ್ದ ಬಾಲಕನ ಪಾಲಿಗೆ ನಿಜವಾದ ಹೀರೋ ಆದ ಯುವಕ, ಇದಪ್ಪ ದೈರ್ಯ

ನನ್ನ ಸಾವಿಗೆ ಪತ್ನಿ, ಅತ್ತೆಯೇ ಕಾರಣ: ನ್ಯಾಯಕೊಡಿಸಲು ಸಾಧ್ಯವಾಗದಿದ್ದರೆ ಚಿತಾಭಸ್ಮ ಚರಂಡಿಗೆ ಎಸೆಯಿರಿ, ವಿಡಿಯೋ ಮಾಡಿಟ್ಟು ಟೆಕ್ಕಿ ಸಾವು

ಮುಂದಿನ ಸುದ್ದಿ
Show comments