Select Your Language

Notifications

webdunia
webdunia
webdunia
webdunia

500 ಬಾರ್‌ಗಳನ್ನು ಮುಚ್ಚಿರಿ: ಮುಖ್ಯಮಂತ್ರಿ ಜಯಲಲಿತಾ ಆದೇಶ

500 ಬಾರ್‌ಗಳನ್ನು ಮುಚ್ಚಿರಿ: ಮುಖ್ಯಮಂತ್ರಿ ಜಯಲಲಿತಾ ಆದೇಶ
ಚೆನ್ನೈ , ಸೋಮವಾರ, 23 ಮೇ 2016 (14:12 IST)
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಜಯಲಲಿತಾ ಮದ್ಯಪಾನ ನಿಷೇಧ ಅಂಗವಾಗಿ ಎರಡು ಗಂಟೆಯೊಳಗೆ 500 ಬಾರ್‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
 
ಚುನಾವಣೆ ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದ ಜಯಲಲಿತಾ ಇದೀಗ, ಅಧಿಕಾರಕ್ಕೇರುತ್ತಿದ್ದಂತೆ ಮದ್ಯಪಾನ ನಿಷೇಧವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಿದ್ದಾರೆ.
  
ಪ್ರತಿ ಮನೆಗೆ 100 ಯೂನಿಟ್ ವಿದ್ಯುತ್ ಉಚಿತ ಮತ್ತು ನವವಿವಾಹಿತೆಗೆ 8 ಗ್ರಾಂ ಚಿನ್ನವನ್ನು ಸರಕಾರದಿಂದ ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.
 
ಎಐಎಡಿಎಂಕೆ ಸರಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ರಾಜ್ಯದ ಜನತೆಗೆ ಬಂಪರ್ ಕೊಡುಗೆ ನೀಡಲು ಮುಂದಾಗಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಪ್ ಪಕ್ಷ ಸ್ಪರ್ಧೆ: ಕೇಜ್ರಿವಾಲ್