Select Your Language

Notifications

webdunia
webdunia
webdunia
webdunia

ಪರಸ್ಪರ ಬಿಟ್ಟಿರಲಾರದೇ ಓಡಿ ಹೋದ ಕ್ಲಾಸ್ ಮೇಟ್ ‘ಪ್ರೇಮಿಗಳು’!

ಅಪರಾಧ ಸುದ್ದಿಗಳು
ಅಹಮ್ಮದಾಬಾದ್ , ಮಂಗಳವಾರ, 12 ಜನವರಿ 2021 (09:31 IST)
ಅಹಮ್ಮದಾಬಾದ್: ಶಾಲೆ ತೆರೆಯದೇ ಪರಸ್ಪರ ನೋಡಲೂ ಆಗದೇ ಬೇಸತ್ತ ಪ್ರೇಮಿಗಳಿಬ್ಬರು ಓಡಿ ಹೋಗಿ ದಂಪತಿಗಳಂತೆ ಬದುಕಲು ಹೊರಟ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಇಬ್ಬರೂ 9 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು. ಕಳೆದ ಮಾರ್ಚ್ ನಿಂದ ಪರಸ್ಪರ ಭೇಟಿಯಾಗಲಾಗದೇ ಇಬ್ಬರೂ ಪರಿತಪಿಸುತ್ತಿದ್ದರು. ಕೊನೆಗೆ ಇಬ್ಬರೂ ಧೈರ್ಯ ಮಾಡಿ ಮನೆಯಿಂದ ತಪ್ಪಿಸಿಕೊಂಡಿದ್ದು ಮತ್ತೊಂದು ಊರಿನಲ್ಲಿ 500 ರೂ.ಗಳಿಗೆ ಮನೆ ಬಾಡಿಗೆ ಪಡೆದು ಹೊಸ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದರು. ಮನೆಯಿಂದ ಬರುವಾಗ ಬಾಲಕ 25 ಸಾವಿರ ರೂ. ಮತ್ತು ಬಾಲಕಿ 5 ಸಾವಿರ ರೂ.ಗಳನ್ನು ಕದ್ದು ತಂದಿದ್ದರು. ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ಪತ್ತೆ ಮಾಡಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಷಾರಾಮಿ ಬಸ್ ಒಳಗೆ ಮಹಿಳೆಯ ಮೇಲೆ 2 ಬಾರಿ ಮಾನಭಂಗ ಎಸಗಿದ ಕ್ಲೀನರ್