Select Your Language

Notifications

webdunia
webdunia
webdunia
webdunia

ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ ಫಸ್ಟ್ ರ್ಯಾಂಕ್ ಸ್ಟೂಡೆಂಟ್

ಸನ್ಯಾಸತ್ವ ಸ್ವೀಕರಿಸಲು ನಿರ್ಧರಿಸಿದ ಫಸ್ಟ್ ರ್ಯಾಂಕ್ ಸ್ಟೂಡೆಂಟ್
ಅಹಮದಾಬಾದ್ , ಗುರುವಾರ, 8 ಜೂನ್ 2017 (08:50 IST)
ಅಹಮದಾಬಾದ್‌: 12ನೇ ತರಗತಿಯಲ್ಲಿ ಶೇಕಡ 99.9 ಅಂಕಗಳನ್ನು ಪಡೆದು ಪ್ರಥಮ ರ‍್ಯಾಂಕ್‌ ಪಡೆದ ಅಹಮದಾಬಾದ್ ನ ವಿದ್ಯಾರ್ಥಿ ಈಗ ಸನ್ಯಾಸಿಯಾಗಲು ಮುಂದಾಗಿದ್ದಾನೆ.
 
ಅಹಮದಾಬಾದ್‌ನ ವರ್ಷಿಲ್‌ ಷಾ  ಎಂಬ ರ್ಯಾಂಕ್ ಸ್ಟೂಡೆಂಟ್  ಎಲ್ಲಾ ವ್ಯಾಮೋಹಗಳನ್ನು ತೊರೆದು, ದೀಕ್ಷೆ ಪಡೆಯುವ ಮೂಲಕ ಜೈನ ಸನ್ಯಾಸಿಯಾಗಲು ಮುಂದಾಗಿದ್ದಾನೆ.  ವರ್ಷಿಲ್‌ ಅವರ ತಂದೆ ಆದಾಯ ತೆರಿಗೆ ಇಲಾಖೆ ಅಧಿಕಾರಿ. ಮಗನ ನಿರ್ಧಾರಕ್ಕೆ ತಂದೆ–ತಾಯಿ ಸಹ ಬೆಂಬಲ ನೀಡಿದ್ದಾರೆ. 
 
ಎರಡು ವಾರಗಳ ಹಿಂದೆಯಷ್ಟೇ ಗುಜರಾತ್‌ ಪ್ರೌಢ ಶಿಕ್ಷಣ ಮಂಡಳಿ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿತ್ತು. 17 ವರ್ಷದ ವರ್ಷಿಲ್‌ ಸಂತೋಷಕ್ಕೆ ಪಾರವೇ ಇರಲಿಲ್ಲ. ವರ್ಷಿಲ್‌ ಪ್ರಥಮ ಸ್ಥಾನ ಪಡೆದಿದ್ದರು. ಆದರೆ, ಈಗ ವರ್ಷಿಲ್ ಅವರು ಕೈಗೊಂಡಿರುವ ನಿರ್ಧಾರಕ್ಕೆ ಪೋಷಕರಿಗೆ ಅಚ್ಚರಿಯಾಗಿಲ್ಲ. ಬದಲಾಗಿ ಸಂತಸ ವ್ಯಕ್ತಪಡಿಸಿದ್ದಾರೆ ಎಂಬುದು ವಿಪರ್ಯಾಸ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಸ್ಥಾನಕ್ಕಾಗಿ ಚುನಾವಣೆ ದಿನಾಂಕ ಘೋಷಣೆ