Select Your Language

Notifications

webdunia
webdunia
webdunia
webdunia

10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ
ಥಾಣೆ , ಶನಿವಾರ, 1 ಅಕ್ಟೋಬರ್ 2016 (12:42 IST)
10 ನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾದ ಹೇಯ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಂದಿವಿಲಿ ಗ್ರಾಮದ ಕಲ್ಯಾಣ- ಶ್ರಿಮಲಾಂಗ್ ರಸ್ತೆಯ ಬಳಿ ಈ ಇಬ್ಬರು ಯುವಕರು ಈ ಕುಕೃತ್ಯವನ್ನು ನಡೆಸಿದ್ದಾರೆ. 
 
ಗುರುವಾರ ಬಾಲಕಿ ತನ್ನ ಮನೆ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ನಿಂತು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಳು. ಆಗ ಅಲ್ಲಿಗೆ ಬಂದ ಆರೋಪಿಗಳಲ್ಲಿ ಒಬ್ಬನಾದ ಬರ್ಕ್ಯಾ ಆಕೆಯ ಸ್ನೇಹಿತರನ್ನು ಹೆದರಿಸಿ ಅಲ್ಲಿಂದ ಓಡಿಸಿದ್ದಾನೆ. ಬಳಿಕ ತನ್ನ ಸ್ನೇಹಿತನೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ. ಬಳಿಕ ಅವರಿಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ.
 
ಅವರು ಅಲ್ಲಿಂದ ಪಲಾಯನವಾದ ಬಳಿಕ ಅಲ್ಲಿಂದ ನಿರ್ಗಮಿಸಿದ ಬಾಲಕಿ ಮನೆಗೆ ಬಂದು ನಡೆದ ಸಂಗತಿಯನ್ನೆಲ್ಲ ಪೋಷಕರಿಗೆ ತಿಳಿಸಿದ್ದಾಳೆ. 
 
ಕೋಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ವಿರುದ್ಧ ಐಪಿಸಿ ವಿಭಾಗ 376(ಅತ್ಯಾಚಾರ) 377( ಅಸಹಜ ಅಪರಾಧ) ಮತ್ತು ಪೋಸ್ಕೋ ಕಾಯಿದೆಯಡಿ  ಪ್ರಕರಣ ದಾಖಲಾಗಿದೆ. 
 
ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿ ನಿಮಿತ್ತ ದೇಶವಾಸಿಗಳಿಗೆ ಪ್ರಧಾನಿ ಶುಭಾಶಯ