Webdunia - Bharat's app for daily news and videos

Install App

ಫೇಸ್‌ಬುಕ್ ಚಾಟ್ ಮಾಡ್ಬೇಡಾ ಅಂದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

Webdunia
ಭಾನುವಾರ, 17 ಸೆಪ್ಟಂಬರ್ 2017 (16:19 IST)
ಮಿತಿಮೀರಿ ಸಮಯವನ್ನು ಫೇಸ್‌ಬುಕ್‌ನಲ್ಲಿ ಕಳೆಯುತ್ತಿರುವುದಕ್ಕೆ ಸಹೋದರ ಬೈದಿರುವುದನ್ನು ಸಹಿಸದ ಪಿಯುಸಿ ಓದುತ್ತಿದ್ದ ಸಹೋದರಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪರಗಣಾ ಜಿಲ್ಲೆಯಲ್ಲಿ ನಡೆದಿದೆ.
ಬಾಲಕಿ ತನ್ನ ಮಲಗುವ ಕೋಣೆಯಲ್ಲಿ ನೇಣುಹಾಕಿಕೊಂಡಿದ್ದಾಳೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
 
ಬಾಲಕಿಗೆ ಮೊಬೈಲ್ ಕೊಡಿಸಿದ ನಂತರ ಆಕೆ ದಿನದ ಹೆಚ್ಚು ಕಾಲವನ್ನು ಮೊಬೈಲ್‌ ಚಾಟ್ ಮಾಡುವ ಮೂಲಕವೇ ಕಳೆಯುತ್ತಿದ್ದಳು.. ಆಹಾರ ಸೇವನೆ ಮತ್ತು ಅಧ್ಯಯನದಲ್ಲೂ ಆಸಕ್ತಿ ಕಳೆದುಕೊಂಡಿದ್ದಳು. ಶಾಲೆಗೆ ಕೂಡಾ ಹೋಗುತ್ತಿರಲಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.  
 
ಆಕೆಯ ಸಹೋದರ ಅವಳನ್ನು ದೂಷಿಸಲು ಬಳಸುತ್ತಿದ್ದಳು, ಶುಕ್ರವಾರ ಬೆಳಿಗ್ಗೆ ಸಹ ಅವಳನ್ನು ಖಂಡಿಸಿದರು" ಎಂದು ಅವರು ಹೇಳಿದರು.
 
ಸಹೋದರ ಮೊಬೈಲ್ ಬಳಕೆ ಮತ್ತು ಫೇಸ್‌ಬುಕ್ ಗೀಳಿಗಾಗಿ ಸದಾ ಟೀಕಿಸುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
 
ಪೋಷಕರು ಅನಾರೋಗ್ಯದಿಂದ ಬಳಲುತ್ತಿದ್ದ ಸಂಬಂಧಿಯೊಬ್ಬರನ್ನು ನೋಡಲು ತೆರಳಿದ್ದಾಗ, ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾವು 8 ಗಂಟೆಗೆ ಮರಳಿದಾಗ ಪುತ್ರಿ ಫ್ಯಾನ್‌‌ಗೆ ನೇಣುಹಾಕಿಕೊಂಡಿದ್ದಳು ಎಂದು ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಪುತ್ರಿ ಸಾಯುವ ಮುನ್ನ ತನ್ನ ವಾಟ್ಸಪ್‌ ಸ್ಟೇಟಸ್ ಬದಲಿಸಿ ಐಯಾಮ್ ಡೆಡ್ ಎನ್ನುವ ಸ್ಟೇಟಸ್ ಹಾಕಿದ್ದಳು. ಫೇಸ್‌ಬುಕ್‌ನಲ್ಲೂ ಕೂಡಾ ತನ್ನ ಜೀವನದ ಮೇಲಿನ ಆಸಕ್ತಿಯನ್ನು ಕಳೆದುಕೊಂಡಿದ್ದಾಗಿ ಬರೆದುಕೊಂಡಿದ್ದಾಳೆ ಎನ್ನಲಾಗಿದೆ.
 
ಏತನ್ಮಧ್ಯೆ ಪೊಲೀಸರು ಬಾಲಕಿಯ ಹತ್ಯೆ ಕುರಿತಂತೆ ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments