Webdunia - Bharat's app for daily news and videos

Install App

ರೈಲಿನಲ್ಲಿ ಸೀಟಿಗಾಗಿ ಪ್ರಯಾಣಿಕರ ನಡುವೆ ಗಲಾಟೆ: ಒಬ್ಬನ ಕೊಲೆಯಲ್ಲಿ ಅಂತ್ಯ

Sampriya
ಶುಕ್ರವಾರ, 22 ನವೆಂಬರ್ 2024 (17:55 IST)
ಮುಂಬೈ: ರೈಲಿನಲ್ಲಿ ಸೀಟಿನ ವಿಚಾರವಾಗಿ ಶುರುವಾದ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸೆಂಟ್ರಲ್ ರೈಲ್ವೆಯ ಘಾಟ್‌ಕೋಪರ್ ನಿಲ್ದಾಣದಲ್ಲಿ ನಡೆದಿದೆ.

ರೈಲಿನಲ್ಲಿ ಆಸನಕ್ಕಾಗಿ ಜಗಳವಾಡಿದ 16 ವರ್ಷದ ಅಪ್ರಾಪ್ತ, ಕೋಪದಲ್ಲಿ  ವ್ಯಕ್ತಿಯೊಬ್ಬನನ್ನು ಇರಿದು ಕೊಲೆ ಮಾಡಿದ್ದಾರೆ. ಈ ದುರ್ಘಟನೆ ನವೆಂಬರ್ 14ರಂದು ನಡೆದಿದೆ.  ಪೊಲೀಸರ ಪ್ರಕಾರ, ಹತ್ಯೆಯಾದ ಅಂಕುಶ್ ಭಗವಾನ್ ಭಲೇರಾವ್ ಅವರು ನವೆಂಬರ್ 14 ರಂದು ಟಿಟ್ವಾಲಾದಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ಗೆ ಹೋಗುವ ವೇಗದ ರೈಲನ್ನು ಹತ್ತಿದ್ದಾರೆ.

ಪ್ರಯಾಣದ ವೇಳೆ ಅಂಕುಶ್ ಮತ್ತು ಅಪ್ರಾಪ್ತ ಬಾಲಕನ ನಡುವೆ ಸೀಟಿನ ವಿಚಾರದಲ್ಲಿ ತೀವ್ರ ವಾಗ್ವಾದ ನಡೆದು ಅಪ್ರಾಪ್ತನ ಮೇಲೆ ಅಂಕುಶ್ ಕಪಾಳಮೋಕ್ಷ ಮಾಡಿದ್ದಾನೆ.

ಅಂಕುಶ್ ಮರುದಿನ ಬೆಳಿಗ್ಗೆ ಅದೇ ರೈಲಿನಲ್ಲಿ ಘಾಟ್‌ಕೋಪರ್‌ಗೆ ಹೋಗಿ ಪ್ಲಾಟ್‌ಫಾರ್ಮ್ ನಂ. 4ನಲ್ಲಿ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡ ಅವರನ್ನು ರಾಜವಾಡಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಅಪ್ರಾಪ್ತನನ್ನು ಬಂಧಿಸಿದ್ದಾರೆ ಮತ್ತು ಸಾಕ್ಷ್ಯವನ್ನು ಮರೆಮಾಡಲು ಸಹಾಯ ಮಾಡಿದ ಅವನ ಸಹೋದರನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ವಿಚಾರಣೆಯ ವೇಳೆ, ಅಪ್ರಾಪ್ತ ವಯಸ್ಕನು ಕೊಲೆಯನ್ನು ಒಪ್ಪಿಕೊಂಡಿದ್ದಾನೆ, ಅವನು ತನ್ನ ಮನೆಯ ಛಾವಣಿಯ ಮೇಲೆ ಚಾಕುವನ್ನು ಬಚ್ಚಿಟ್ಟು ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನ ಕೂದಲನ್ನು ಕತ್ತರಿಸಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ
Show comments