Webdunia - Bharat's app for daily news and videos

Install App

ನಕಲಿ ಪಾಸ್ ಪೋರ್ಟ್ ಕೇಸ್: ಛೋಟಾ ರಾಜನ್ ಸೇರಿ ನಾಲ್ವರಿಗೆ 7 ವರ್ಷ ಜೈಲು

Webdunia
ಮಂಗಳವಾರ, 25 ಏಪ್ರಿಲ್ 2017 (18:01 IST)
ಭೂಗತ ಪಾತಕಿ, ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ರಾಜೇಂದ್ರ ಸದಾಶಿವ್ ನಿಖಲ್ಜೆ ಅಲಿಯಾಸ್ ಛೋಟಾ ರಾಜನ್, ಸೇರಿದಂತೆ ನಾಲ್ವರಿಗೆ ನಕಲಿ ಪಾಸ್ ಪೋರ್ಟ್ ಬಳಸಿದ ಪ್ರಕರಣದಲ್ಲಿ ದೆಹಲಿಯ ವಿಶೇಷ ಸಿಬಿಐ ನ್ಯಾಯಾಲಯ 7 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಛೋಟಾ ರಾಜನ್ ಸೇರಿ ಅವನಿಗೆ ಸಹಕರಿಸಿದ ಮೂವರು ಸರ್ಕಾರಿ ಅಧಿಕಾರಿಗಳು ದೋಷಿಗಳೆಂದು ನಿನ್ನೆ ವಿಶೇಷ ನ್ಯಾಯಾಧೀಶ ವೀರೇಂದರ್ ಕುಮಾರ್ ಗೋಯಲ್ ತೀರ್ಪಿತ್ತಿದ್ದರು. ಇವತ್ತು ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ ಮತ್ತು ತಲಾ 15 ಸಾವಿರ ದಂಡ ವಿಧಿಸಲಾಗಿದೆ.

ಮೋಹನ್ ಕುಮಾರ್ ಎಂಬುವವರ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಪಡೆದಿದ್ದ ಛೋಟಾ ರಾಜನ್ ಅದರಲ್ಲೇ ಹಲವು ದೇಶಗಳಿಗೆ ಸಂಚಾರ ನಡೆಸಿದ್ದ. ಈತನಿಗೆ ಮೂವರು ಹಿರಿಯ ಅಧಿಕಾರಿಗಳು ಸಹಕಾರ ನೀಡಿದ್ದರು. ಈ ಬಗ್ಗೆ ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ನಾಲ್ವರು ಅಪರಾಧಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 471, 468, 467, 419 ಮತ್ತು 120ಬಿ ಅಡಿಯಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು.

ಛೋಟಾ ರಾಜನ್ ಸದ್ಯ, ತಿಹಾರ್ ಜೈಲಿನಲ್ಲಿದ್ದು, ಅಧಿಕಾರಿಗಳು ಜಾನು ಪಡೆದು ಹೊರಗಿದ್ದಾರೆ. 1998-99ರಲ್ಲಿ ಮೋಹನ್ ಕುಮಾರ್ ಹೆಸರಲ್ಲಿ ಅಧಿಕಾರಿಗಳಾದ ಜಯಶ್ರೀ ದತ್ತಾತ್ರೇಯ ರಹಟೆ, ದೀಪಕ್ ನಟ್ವರ್ ಲಾಲ್, ಲಲಿತಾ ಲಕ್ಷ್ಮಣ್ ನಕಲಿ ಪಾಸ್ ಪೋರ್ಟ್ ನೀಡಿದ್ದರು. ಅಕ್ಟೋಬರ್ 2015ರಲ್ಲೇ ಛೋಟಾ ರಾಜನ್`ನನ್ನ ಇಂಡೋನೇಶಿಯಾ ಪೊಲೀಸರು ಬಂಧಿಸಿದ್ದರು. ನವೇಂಬರ್ 2015ರಂದು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಸುಲಿಗೆ, ಮಾದಕ ವಸ್ತು ಸಾಗಣೆ ಸೇರಿದಂತೆ ಮಹಾರಾಷ್ಟ್ರ, ದೆಹಲಿ, ಗುಜರಾತ್, ಉತ್ತರಪ್ರದೇಶದಲ್ಲಿ ಛೋಟಾರಾಜನ್ ವಿರುದ್ಧ 70 ಪ್ರಕರಣಗಳಿವೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಹೆಸರು: ಕನ್ನಡಿಗರು ಸಿಗಲಿಲ್ವಾ ಎಂದ ನೆಟ್ಟಿಗರು

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ಬೆಲೆ ಇನ್ನೂ ಏರಿಕೆ, ಎಷ್ಟಾಗಿದೆ ನೋಡಿ

ಪಹಲ್ಗಾಮ್ ದಾಳಿ ನಡೆದು ಎರಡು ತಿಂಗಳಾಗಿಲ್ಲ ಆಗ್ಲೇ ಪಾಕಿಸ್ತಾನದ ಚಾನೆಲ್ ಗಳ ನಿಷೇಧ ವಾಪಸ್

ಕೇಂದ್ರದಿಂದ ಶೀಘ್ರದಲ್ಲೇ ಮಧ್ಯಮವರ್ಗದವರಿಗೆ ಗುಡ್ ನ್ಯೂಸ್: ಇವುಗಳ ಬೆಲೆ ಕಡಿತ

ಮುಂದಿನ ಸುದ್ದಿ