Select Your Language

Notifications

webdunia
webdunia
webdunia
webdunia

ಭಾರತೀಯ ಧ್ವಜವನ್ನು ಕಸದ ಬುಟ್ಟಿಗೆ ಎಸೆದು ಅವಮಾನಿಸಿದ ಚೈನಾ ನಾಗರಿಕ!

ಭಾರತೀಯ ಧ್ವಜವನ್ನು ಕಸದ ಬುಟ್ಟಿಗೆ ಎಸೆದು ಅವಮಾನಿಸಿದ ಚೈನಾ ನಾಗರಿಕ!
Noida , ಬುಧವಾರ, 29 ಮಾರ್ಚ್ 2017 (08:00 IST)
ನೋಯ್ಡಾ: ಭಾರತದ ನೆಲದಲ್ಲೇ ಭಾರತದ ರಾಷ್ಟ್ರೀಯಕ್ಕೆ ಅವಮಾನವೆಸಗಿದ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಚೀನಾ ನಾಗರಿಕನೊಬ್ಬ ಭಾರತೀಯ ಧ್ವಜವನ್ನು ಹರಿದು ಕಸದಬುಟ್ಟಿಗೆ ಎಸೆದು ಅವಮಾನ ಮಾಡಿದ್ದಾನೆ.

 

ಇಲ್ಲಿನ ಖಾಸಗಿ ಮೊಬೈಲ್ ಕಂಪನಿಯೊಂದರಲ್ಲಿ ಈ ವ್ಯಕ್ತಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಈತ ತನ್ನ ಕಚೇರಿಯಲ್ಲಿ ಈ ಕೃತ್ಯ ಎಸಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸಾವಿರಾರು ಮಂದಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.

 
ಈ ಪ್ರಕರಣದ ಕುರಿತು ಪೊಲೀಸರು ಚೀನಾ ನಾಗರಿಕನ ಮೇಲೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಧ್ವಜಕ್ಕೆ ಅವಮಾನ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.  ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ನಿವಾಸಕ್ಕೆ ಜೆಡಿಎಸ್ ಬಂಡಾಯ ಶಾಸಕರ ಭೇಟಿ