Select Your Language

Notifications

webdunia
webdunia
webdunia
webdunia

ಉತ್ತರಾಖಂಡದ ಬಾರಾಹುತಿ ಗಡಿ ದಾಟಿ ಒಳನುಗ್ಗಿದ ಚೀನಾ ಸೇನೆ

ಉತ್ತರಾಖಂಡದ ಬಾರಾಹುತಿ ಗಡಿ ದಾಟಿ ಒಳನುಗ್ಗಿದ ಚೀನಾ ಸೇನೆ
ಉತ್ತರಾಖಂಡ , ಸೋಮವಾರ, 31 ಜುಲೈ 2017 (17:20 IST)
ಚಮೋಲಿ:ಇತ್ತ ಸಿಕ್ಕಿಂನ ಡೋಕ್ಲಾಂ ಗಡಿಯಲ್ಲಿ ಖ್ಯಾತೆ ಮುಂದುವರೆಸಿರುವ ಚೀನಾ ಅತ್ತ ಉತ್ತರಾಖಂಡದ ಚಮೋಲಿ ಜಿಲ್ಲೆಯ ಬಾರಾಹುತಿ ಗಡಿ ಬಳಿ ಚೀನಾ ಸೇನೆ 1 ಕಿ.ಮೀ ಭಾರತದ ಗಡಿಯೊಳಗೆ ನುಗ್ಗಿಬಂದಿದೆ.
 
ಇದು ಎರಡನೆ ಸಲ ಚೀನಾ ಭಾರತದ ಗಡಿ ಉಲ್ಲಂಘಿಸುತ್ತಿರುವುದಾಗಿದ್ದು, ಜು 25ರಂದು ಬೆಳಿಗ್ಗೆ 9 ಗಂಟೆಗೆ ಭಾರತದ ಗಡಿ ಉಲ್ಲಂಘಿಸಿರುವ ಚೀನಾ ಸೇನೆ ಸುಮಾರು 800 ಮೀಟರ್ ಗಳಿಂದ 1 ಕಿ.ಮೀ ವರೆಗೆ ಒಳನುಗ್ಗಿ ಬಂದಿದೆ
 
ಜು.19ರಂದು ಕೂಡ ಚೀನ ಸೇನೆ ಚಮೋಲಿ ಜಿಲ್ಲೆಯಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಿ ಒಳಬಂದಿತ್ತು ಮತ್ತು ತನ್ನ ಶಸ್ತ್ರಾಸ್ತ್ರಗಳೊಂದಿಗೆ ಡೇರೆ ಹಾಕಿಕೊಂಡಿತ್ತು. ಅಗ ಬಾರಾಹುತಿ ಮೈದಾನದಲ್ಲಿ ಸರ್ವೇ ಕಾರ್ಯ ನಡೆಸಲು ಹೋಗಿದ್ದ ಚಮೋಲಿ ಜಿಲ್ಲಾಧಿಕಾರಿ ಮತ್ತು ಐಟಿಬಿಪಿಯ ಇತರ ಅಧಿಕಾರಿಗಳನ್ನು ಚೀನ ಸೇನೆ ಹಿಂದಕ್ಕೆ ಕಳುಹಿಸಿತ್ತು ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಭದ್ರತಾ ಸಲೆಹೆಗಾರ ಅಜಿತ್ ದೋವಲ್ ಚೀನಾಗೆ ಭೇಟಿ ನೀಡಿದ ಈ ಸಂದರ್ಭದಲ್ಲೇ ಚೀನಾ ತನ್ನ ಹಳೇ ಚಾಳಿ ಮುಂದುವರೆಸಿರುವುದು ಉಭಯ ದೇಶಗಳ ನಡುವಿನ ಸಂಭಂಧಕ್ಕೆ ಮತ್ತಷ್ಟು ಧಕ್ಕೆಯುಂಟಾಗಲಿದೆ ಎನ್ನಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

13 ಗಂಟೆಗಳ ಕಾಲ ಪ್ರವಾಹದೊಂದಿಗೆ ಹೋರಾಡಿ ಬದುಕಿದ 62ರ ಮಹಿಳೆ