Daily Horoscope

Select Your Language

Notifications

webdunia
webdunia
webdunia
webdunia

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

Ketan Agarwal
ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣವಾದ ಲೋಹಗಡ್ ಕೋಟೆಯಲ್ಲಿ ನಡೆದ ಯುವಕ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಯಲ್ಲಿ ಹಲವು ಆಘಾತಕಾರಿ ಹಾಗೂ ಬೆಚ್ಚಿಬೀಳಿಸುವ ಸಂಗತಿಗಳು ಹೊರಬಿದ್ದಿವೆ. ಆರೋಪಿ ಸಿಯಾ ಗೋಯಲ್, ಕೇತನ್‌ನನ್ನು ಪ್ರಪಾತಕ್ಕೆ ತಳ್ಳುವ ಮುನ್ನ ಆತನ ಪೋಟೋ ತೆಗೆದಿದ್ದಲ್ಲದೆ, ಕೊಲೆಯ ನಂತರ ಪೊಲೀಸರಿಂದ ಹೇಗೆ ಬಚಾವಾಗುವುದು ಎಂದು ‘ChatGPT’ ನಂತಹ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಲ್ಲಿ ಹುಡುಕಾಟ ನಡೆಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ.
 
ಘಟನೆಯ ಹಿನ್ನೆಲೆ ಹಾಗೂ ಚಾರ್ಜ್‌ಶೀಟ್ ವಿವರ:
ದೋಷಾರೋಪಣೆ ಪಟ್ಟಿಯ ಪ್ರಕಾರ, ಸಿಯಾ ಗೋಯಲ್ ಮತ್ತು ಕೇತನ್ ಅಗರ್ವಾಲ್ ಲೋಹಗಡ್ ಕೋಟೆಗೆ ಭೇಟಿ ನೀಡಿದ್ದಾಗ, ಕೇತನ್‌ನನ್ನು ಪ್ರಪಾತದ ತುದಿಯಲ್ಲಿ ನಿಲ್ಲಿಸಿ ಆತನ ಫೋಟೋ ಕ್ಲಿಕ್ಕಿಸಿದ್ದಳು. ಅದೇ ಕ್ಷಣದಲ್ಲಿ ಆತನನ್ನು ಕಡಿದಾದ ಪ್ರಪಾತಕ್ಕೆ ತಳ್ಳಿ ಕೊಲೆ ಮಾಡಿದ್ದಳು. ಈ ಕೃತ್ಯ ಆಕಸ್ಮಿಕವಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾಗಿ ಯೋಜಿಸಿದ ಕೊಲೆಯಾಗಿತ್ತು ಎಂದು ಪೊಲೀಸರು ಸಾಕ್ಷ್ಯ ಸಮೇತ ಉಲ್ಲೇಖಿಸಿದ್ದಾರೆ.
 
ChatGPT ಯಲ್ಲಿ ಹುಡುಕಾಟ ನಡೆಸಿದ್ದ ಸಿಯಾ:
ಕೇತನ್‌ನನ್ನು ಪ್ರಪಾತಕ್ಕೆ ತಳ್ಳಿದ ನಂತರ, ಆರೋಪಿ ಸಿಯಾ ತನ್ನ ಮೊಬೈಲ್‌ನಲ್ಲಿ ChatGPT ಹಾಗೂ ಗೂಗಲ್ ಬಳಸಿ ಹಲವು ವಿಷಯಗಳನ್ನು ಹುಡುಕಾಡಿದ್ದಳು.
 
"ಪ್ರೀತಿಸುವ ವ್ಯಕ್ತಿಯನ್ನು ಕಳೆದುಕೊಂಡಾಗ ದುಃಖಿತರಂತೆ ಹೇಗೆ ನಟಿಸುವುದು/ತೋರಿಸಿಕೊಳ್ಳುವುದು?"
 
"ಇಂತಹ ಘಟನೆ ನಡೆದಾಗ ಪೊಲೀಸರ ವಿಚಾರಣೆ ಮತ್ತು ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ?"
 
ಎಂಬುದರ ಬಗ್ಗೆ ಆಕೆ ಇಂಟರ್ನೆಟ್‌ನಲ್ಲಿ ತೀವ್ರ ಹುಡುಕಾಟ ನಡೆಸಿದ್ದಳು ಎಂದು ಸೈಬರ್ ತಜ್ಞರು ಮತ್ತು ಪೊಲೀಸರು ಆಕೆಯ ಮೊಬೈಲ್‌ನಿಂದ ಡಿಜಿಟಲ್ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿದ್ದಾರೆ.
 
ಸಾಕ್ಷ್ಯಾಧಾರಗಳ ಬಲ:
ಪೊಲೀಸರು ಸಿಯಾ ಮತ್ತು ಕೇತನ್ ನಡುವೆ ನಡೆದ ಹಳೆಯ ಚಾಟ್‌ಗಳು, ಮೊಬೈಲ್‌ನ ಬ್ರೌಸಿಂಗ್ ಹಿಸ್ಟರಿ, ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಹಾಗೂ ಡಿಜಿಟಲ್ ಫೋರೆನ್ಸಿಕ್ ವರದಿಗಳನ್ನು ಪ್ರಮುಖ ಸಾಕ್ಷ್ಯಗಳಾಗಿ ಚಾರ್ಜ್‌ಶೀಟ್‌ನಲ್ಲಿ ಸೇರಿಸಿದ್ದಾರೆ. ಕೃತ್ಯ ಎಸಗಿದ ನಂತರ ಆಕೆ ಸಾಕ್ಷ್ಯ ನಾಶಪಡಿಸಲು ಮತ್ತು ಅಪರಾಧದಿಂದ ನುಣುಚಿಕೊಳ್ಳಲು ನಡೆಸಿದ ಪ್ರಯತ್ನಗಳು ಈಗ ಆಕೆಯ ವಿರುದ್ಧವೇ ಬಲವಾದ ಸಾಕ್ಷಿಯಾಗಿ ಮಾರ್ಪಟ್ಟಿವೆ.
 
ಪ್ರಸ್ತುತ ಈ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಪೊಲೀಸರು ನ್ಯಾಯಾಲಯದಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಎಲ್ಲಾ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video