Select Your Language

Notifications

webdunia
webdunia
webdunia
webdunia

ನಿಮಗೆ ಗೊತ್ತೇ..? ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲೇ ಬಾಲ್ಯವಿವಾಹ ಹೆಚ್ಚು

Child Rights Protection Board
ನವದೆಹಲಿ , ಭಾನುವಾರ, 11 ಜೂನ್ 2017 (13:23 IST)
ನವದೆಹಲಿ:ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲೇ ಹೆಚ್ಚೆಚ್ಚು ಬಾಲ್ಯವಿವಾಹಗಳಾಗುತ್ತಿವೆ ಎಂಬ ಆತಂಕಕಾರಿ ವರದಿಯನ್ನು ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿ ನೀಡಿದೆ. ಇನ್ನೊಂದು ಆಘಾತಕಾರಿ ವಿಷಯವೆಂದರೆ ದೇಶದಲ್ಲೇ ಅತಿಹೆಚ್ಚು ಬಾಲ್ಯ ವಿವಾಹವಾಗುತ್ತಿರುವ ಜಿಲ್ಲೆಗಳ ಪೈಕಿ ಕರ್ನಾಟಕದ ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲೆಗಳಿಗೂ ಸ್ಥಾನ ಸಿಕ್ಕಿರುವುದು.
 
ಇನ್ನು ಎಲ್ಲ ರಾಜ್ಯಗಳಿಗಿಂತ ರಾಜಸ್ಥಾನದಲ್ಲೇ ಬಾಲ್ಯ ವಿವಾಹದ ಪ್ರಮಾಣ ಹೆಚ್ಚು. ಇಲ್ಲಿ 10ರಿಂದ 20ರ ವಯಸ್ಸಿನ ಬಾಲಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿವಾಹ ಮಾಡುತ್ತಾರೆ  ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿ ವರದಿ ತಿಳಿಸಿದೆ. ದಾವಣಗೆರೆಯಲ್ಲಿ ಬಾಲ್ಯ ವಿವಾಹ ತುಸು ಹೆಚ್ಚಾಗಿಯೇ ಕಂಡು ಬಂದಿದ್ದರೆ, ಬಾಗಲಕೋಟೆಯಲ್ಲಿ ಹಿಂದಿಗಿಂತ ಕಡಿಮೆ ಬಾಲ್ಯವಿವಾಹ ಗಳು ವರದಿಯಾಗಿವೆ. 18 ತುಂಬುವ ಮೊದಲೇ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವ ಪ್ರವೃತ್ತಿ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿದೆ ಎಂದು ಈ ವರದಿ ಹೇಳಿದೆ.
 
2011ರ ವರದಿ ಪ್ರಕಾರ ಅತೀಹೆಚ್ಚು ಬಾಲ್ಯ ವಿವಾಹ ಇರುವ 70 ಜಿಲ್ಲೆಗಳ ಪೈಕಿ, ನಗರಗಳಲ್ಲೇ ಶೇ. 25.8 ಬಾಲ್ಯವಿವಾಹಗಳಾಗುತ್ತವೆ. ನಗರದಲ್ಲಿನ 10ರಿಂದ 17 ವರ್ಷದೊಳಗಿನ ಪ್ರತಿ ಐವರು ಬಾಲೆ ಯರಲ್ಲಿ ಒಬ್ಬರು ಮದುವೆಯಾಗುತ್ತಾರೆ ಎಂದು ಹೇಳಿದೆ. ಆದರೆ ಮಕ್ಕಳಿಗೇಕೆ ಚಿಕ್ಕವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ ಎಂಬುದನ್ನು ಮಾತ್ರ ವರದಿ ತಿಳಿಸಿಲ್ಲ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/.
 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾ ಸಾವಿನ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದೀಪಾ