Select Your Language

Notifications

webdunia
webdunia
webdunia
webdunia

ಅಮ್ಮ ಸತ್ತಿರುವ ಅರಿವಿಲ್ಲದೆ ಎದೆಹಾಲು ಕುಡಿಯುತ್ತಿದ್ದ ಮಗು..!

ಅಮ್ಮ ಸತ್ತಿರುವ ಅರಿವಿಲ್ಲದೆ ಎದೆಹಾಲು ಕುಡಿಯುತ್ತಿದ್ದ ಮಗು..!
ಭೋಪಾಲ್ , ಗುರುವಾರ, 25 ಮೇ 2017 (16:45 IST)
ಅಮ್ಮ ಮೃತಪಟ್ಟಿದ್ದರೂ ಅದರ ಅರಿವಿಲ್ಲದ ಪುಟ್ಟ ಮಗು ತಾಯಿಯ ಎದೆಗೆ ಬಾಯಿ ಹಾಕಿ ಹಾಲು ಕುಡಿಯಲು ಯತ್ನಿಸುತ್ತಿದ್ದ ಮನಕಲುಕುವ ಘಟನೆ ಮಧ್ಯಪ್ರದೇಶದ ಡ್ಯಾಮೋಹ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮೃತದೇಹದ ಬಗ್ಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಿದಾಗ 17 ತಿಂಗಳ ಮಗು ಅಮ್ಮನ ಸಾವಿನ ಅರಿವಿಲ್ಲದೆ ಹಾಲು ಕುಡಿಯಲು ಯತ್ನಿಸುತ್ತಿರುವುದು ಕಂಡುಬಂದಿದೆ.

ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ, ರೈಲ್ವೆ ಹಳಿ ಪಕ್ಕದಲ್ಲಿ ಮಹಿಳೆ ಮಲಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದೆ. ಸಮೀಪಕ್ಕೆ ಬಂದು ನೋಡಿದಾಗ ಅಳುತ್ತಿದ್ದ ಪುಟ್ಟ ಮಗು ಮೃತ ತಾಯಿಯ ಬಳಿ ಹಾಲು ಕುಡಿಯುತ್ತಿದ್ದದ್ದನ್ನ ಕಂಡು ನಮ್ಮ ಕಣ್ಣಲ್ಲೂ ನೀರು ಬಂತು. ದುಃಖ ತಡೆಯಲಾಗಲಿಲ್ಲ ಎನ್ನುತ್ತಾರೆ.

ನಮ್ಮ ಜೀವನದಲ್ಲಿ ಇಂತಹ ಘಟನೆ ಕಂಡಿಲ್ಲ. ಇದು ನಿಜಕ್ಕೂ ಕರುಣಾಜನಕ ಎಅನ್ನುತ್ತಾರೆ ರೈಲ್ವೇ ಪೇದೆ ಅನಂತ್ ರಾಮ್. ಮಗು ವಶಕ್ಕೆ ಪಡೆದಿರುವ ಪೊಲೀಸರು, ಸಂಬಂಧಿಕರು ಪತ್ತೆಯಾಗುವವರೆಗೂ ಅನಾಥಾಶ್ರಮಕ್ಕೆ ಒಪ್ಪಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಟಿಕೆಟ್ ನೀಡುವ ಅಧಿಕಾರ ಯಾರಿಗೂ ಇಲ್ಲ: ಸಿಎಂಗೆ ಡಿಕೆಶಿ ಟಾಂಗ್