Select Your Language

Notifications

webdunia
webdunia
webdunia
webdunia

ಜನ್ಮದಿನದ ಕಾಣಿಕೆ ಹಣವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಮಗು

ಜನ್ಮದಿನದ ಕಾಣಿಕೆ ಹಣವನ್ನು ಪ್ರಧಾನಿ ಪರಿಹಾರ ನಿಧಿಗೆ ನೀಡಿದ ಮಗು
ಭೋಪಾಲ್ , ಗುರುವಾರ, 15 ಸೆಪ್ಟಂಬರ್ 2016 (17:27 IST)
ಏಳು ವರ್ಷದ ಪುಟ್ಟ ಮಗುವೊಂದು ತನ್ನ ಜನ್ಮದಿನದಂದು ಕಾಣಿಕೆಯಾಗಿ ಬಂದ ಬಹುಮಾನದ ಮೊತ್ತವನ್ನು ಪ್ರಧಾನಿ ಪರಿಹಾರ ನಿಧಿಗೆ ಕಳುಹಿಸಿ, ಏನೂ ಆರಿಯದ ಚಿಕ್ಕಪ್ರಾಯದಲ್ಲೇ ದೊಡ್ಡತನವನ್ನು ಮೆರೆದಿದೆ. 
 
ಆಕೆ ಆರಾಧ್ಯಾ ರಾವಲ್, ಮಧ್ಯಪ್ರದೇಶದ ಝಾಬುವಾ ಪ್ರದೇಶದ ಬಾಲಕಿಯಾಗಿದ್ದು, ಗುರುವಾರ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಹಾಯಕವಾಗಲೆಂದು ಹಣವನ್ನು ಪರಿಹಾರ ನಿಧಿಗೆ ಹಣ ಕಳುಹಿಸಿದ್ದಾಳೆ. 
 
ತನಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಬಂದ ಬಂದ 21,000 ಡಿಮ್ಯಾಂಡ್ ಡ್ರಾಫ್ಟ್‌ನ್ನು ಪ್ರಧಾನಿಗೆ ಕಳುಹಿಸುವಂತೆ ಬಾಲಕಿ ತನ್ನ ತಂದೆ ಅರವಿಂದ ಬಳಿ ಹಠ ಮಾಡಿ ಈ ಕೆಲಸವನ್ನು ಮಾಡಿಸಿದ್ದಾಳೆ.
 
ನನ್ನ ಕಾಲೋನಿಯಲ್ಲಿ ವಾಸಿಸುವ ಅನೇಕ ಮಕ್ಕಳನ್ನು ನೋಡಿದ್ದೇನೆ. ಪೋಷಕರು ಬಡವರಾಗಿದ್ದರಿಂದ ಅವರಿಗೆ ಶಿಕ್ಷಣವನ್ನು ಪಡೆಯಲಾಗುತ್ತಿಲ್ಲ. ಹೀಗಾಗಿ ನನ್ನಲ್ಲಿ ಸಂಗ್ರಹವಾದ ಹಣವನ್ನು ಪ್ರಧಾನಿಯವರಿಗೆ ನೀಡ ಬಯಸಿದ್ದೇನೆ. ಅವರದನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸುತ್ತಾರೆ ಎಂಬ ನಂಬಿಕೆ ನನ್ನದು. ಈ ದೇಶದಲ್ಲಿರುವ ಪ್ರತಿಯೊಬ್ಬ ಹುಡುಗಿಯರು ಶೈಕ್ಷಣಿಕವಾಗಿ ಸಬಲರಾಗಬೇಕು ಎಂದಾಕೆ ಮುದ್ದು ಭಾಷೆಯಲ್ಲಿ ಹೇಳುತ್ತಾಳೆ. 
 
ನನ್ನ ಮಗಳು ಈ ವಯಸ್ಸಿನಲ್ಲಿ ಇಂತಹ ಯೋಚನೆ ಮಾಡುತ್ತಾಳೆ ಎಂಬುದು ನನಗೆ ಆಶ್ಚರ್ಯವನ್ನು ತರಿಸಿದೆ ಎಂದು ವೃತ್ತಿಯಲ್ಲಿ ಶಿಕ್ಷಕರಾಗಿರುವ ಅರವಿಂದ ಹೇಳುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕಿರುಕುಳ: ಟ್ವಿಟರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ ಮಹಿಳೆ