ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದ್ದು, ಈ ಸಂದರ್ಭದಲ್ಲಿ ವಿಕಲಚೇತನರನ್ನು ಹೊರತುಪಡಿಸಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು ಎಂದು ಹೇಳಿದೆ.
ಆದರೆ ಸುಪ್ರೀಂಕೋರ್ಟ್‌ನ ಈ ಆದೇಶವನ್ನು ಪಾಲಿಸದೆ, ರಾಷ್ಟ್ರಗೀತೆಗೆ ಅವಮಾನಗೈದ ಕಾಲೇಜು ವಿದ್ಯಾರ್ಥಿಗಳ ಗುಂಪೊಂದನ್ನು ಚಿತ್ರಮಂದಿರದ ಒಳಗೆ ಥಳಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ರಾಷ್ಟ್ರಗೀತೆಗೆ ಅವಮಾನ ಮಾಡಿದರು ಎಂಬ ಆರೋಪದ ಮೇಲೆ ನಾಲ್ವರು ಯುವಕರು ಮತ್ತು ನಾಲ್ವರು ಯುವತಿಯರ ಮೇಲೆ 20 ಜನರಿದ್ದ ತಂಡ ದಾಳಿ ಮಾಡಿದೆ. ಇತ್ತೀಚಿಗೆ ಚೆನ್ನೈನ ಕಾಸಿ ಚಿತ್ರಮಂದಿರದಲ್ಲಿ "Chennai 600028 II" ಚಿತ್ರವನ್ನು ವೀಕ್ಷಿಸುವಾಗ ಈ ಘಟನೆ ನಡೆದಿದೆ.
ದಾಳಿಕೋರರ ಮೇಲೆ ಮತ್ತು ದಾಳಿಗೊಳಗಾದವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದ್ದು ರಾಷ್ಟ್ರಗೀತೆಗೆ ಅಪಮಾನ ಮಾಡಿದುದಕ್ಕಾಗಿ 3 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.