Select Your Language

Notifications

webdunia
webdunia
webdunia
webdunia

ಕದಡಿದ ಕಡಲು; ಜಲಚರಗಳ ಪ್ರಾಣಕ್ಕೆ ಕುತ್ತು

ಕದಡಿದ ಕಡಲು; ಜಲಚರಗಳ ಪ್ರಾಣಕ್ಕೆ ಕುತ್ತು
ಚೆನ್ನೈ , ಶುಕ್ರವಾರ, 3 ಫೆಬ್ರವರಿ 2017 (09:35 IST)
ಚೆನ್ನೈನ ಕಾಮರಾಜರ್ ಬಂದರಿನಲ್ಲಿ ತೈಲ ಸೋರಿಕೆಯಾಗಿ ಒಂದು ವಾರ ಕಳೆದರೂ ಇದುವರೆಗೂ ತೈಲ ತೆರವು ಮಾಡುವ ಕಾರ್ಯ ಮುಗಿದಿಲ್ಲ. ಜನವರಿ 28(ಶನಿವಾರ) ರಂದು ಎರಡು ನೌಕೆಗಳು ಪರಷ್ಪರ ಡಿಕ್ಕಿ ಹೊಡೆದ ಪರಿಣಾಮ ಸೋರಿಕೆಯಾಗಿದ್ದ ಹಲವಾರು ಟನ್‌ಗಟ್ಟಲೆ ತೈಲ ಸುಮಾರು 35ಕೀಮಿಗೂ ಹೆಚ್ಚು ಪ್ರದೇಶಕ್ಕೆ ಹರಡಿದ್ದು ಚೆನ್ನೈ ಕಡಲತೀರಕ್ಕೂ ತಲುಪಿದೆ.
ಸಮುದ್ರದ ನೀರಿನಲ್ಲಿ ತೈಲ ಮಿಶ್ರವಾಗಿರುವುದರಿಂದ ಲಕ್ಷಾಂತರ ಜಲಚರಗಳು ಭಾರಿ ಅಪಾಯದಲ್ಲಿವೆ. 
 
ಕರಾವಳಿ ಕಾವಲು ಪಡೆಯ ನೂರಾರು ಸಿಬ್ಬಂದಿ, ಮೀನುಗಾರರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ತೈಲವನ್ನು ನೀರಿನಿಂದ ಬೇರ್ಪಡಿಯಲು ಭಾರಿಯಂತ್ರಗಳ ನೆರವಿನೊಂದಿಗೆ ಹರಸಾಹಸ ಪಡುತ್ತಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಆದರೆ ತೆರವು ಕಾರ್ಯ ತ್ವರಿತವಾಗಿ ಆಗದ ಕಾರಣ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
 
ತೈಲ ಶೇಖರಣೆಯಾಗಿರುವ ತೀರದಲ್ಲಿ ಸತ್ತ ಮೀನುಗಳ ರಾಶಿ ಬಿದ್ದಿದ್ದು, 20 ಆಮೆಗಳ ಶವ ದೊರೆತಿದೆ. ಜಲಚರಗಳಿಗೆ ಕಂಟಕವಾಗುತ್ತಿರುವ ಈ ಮಾಲಿನ್ಯ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ಆಲಿವ್ ರಿಡ್ಲೆ ಆಮೆಗಳ ಸಂತಾನೋತ್ಪತ್ತಿ ಸಮಯ. ಹೀಗಾಗಿ ತೀರಕ್ಕೆ ಮೊಟ್ಟೆ ಇಡಲು ಬರುತ್ತಿರುವ ಆಮೆಗಳು ತೈಲದಲ್ಲಿ ತೊಯ್ದು ದುರ್ಮರಣವನ್ನಪ್ಪುತ್ತಿವೆ. ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು ಸಂತಾನೋತ್ಪತ್ತಿ ನಡೆಯದೆ ಆಮೆಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಅಪಾಯವಿದೆ, ಎಂದು ಪರಿಸರವಾದಿಗಳು, ಪ್ರಾಣಿದಯಾ ಸಂಘಟನೆ ಕಳವಳ ವ್ಯಕ್ತ ಪಡಿಸಿವೆ.. 
 
ಸುಮಾರು 40 ಟನ್ ತೈಲ ರಾಡಿ ಮತ್ತು 27 ಟನ್ ತೈಲ ಈವರೆಗೆ ಸಮುದ್ರದ ನೀರನ್ನು ಸೇರಿದೆ ಎಂದು ಕರಾವಳಿ ಕಾವಲು ಪಡೆ ಹೇಳಿದೆ. ಮೂಲಗಳ ಪ್ರಕಾರ ಈವರೆಗೆ ಸುಮಾರು 40 ಟನ್ ತೈಲ ರಾಡಿಯನ್ನು ನೀರಿನಿಂದ ಹೊರತೆಗೆಯಲಾಗಿದೆ. ಆದರೂ ಪ್ರಯೋಜನವಾಗಿಲ್ಲ. ತೀವ್ರಗತಿಯಲ್ಲಿ ಪಸರಿಸುತ್ತಿರುವ ತೈಲವನ್ನು ಸ್ವಚ್ಛಗೊಳಿಸುವುದು ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂಜಾಬ್-ಗೋವಾ ಪ್ರಚಾರಕ್ಕೆ ತೆರೆ