ಹೈದರಾಬಾದ್: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಕುಟುಂಬದ ಒಟ್ಟು ಆಸ್ಥಿಯನ್ನು ಘೋಷಿಸಿಕೊಂಡಿದ್ದು, ಆಸ್ಥಿ ಹೆಚ್ಚಳವಾಗಿರುವುದರಲ್ಲಿ ಸಿಎಂಗಿಂತಲೂ ಅವರ 3 ವರ್ಷದ ಮೊಮ್ಮಗನೇ ಮುಂದಿದ್ದಾನೆ!
ಚಂದ್ರಬಾಬು ನಾಯ್ಡು ಪ್ರತೀ ವರ್ಷವೂ ತಮ್ಮ ಆಸ್ಥಿ ಘೋಷಣೆ ಮಾಡುತ್ತಾರೆ. ಅದೇ ರೀತಿ ಈ ವರ್ಷವೂ ಮಾಡಿದ್ದು, 69.28 ಕೋಟಿ ಇದ್ದ ಅವರ ಕುಟುಂಬದ ಒಟ್ಟು ಆಸ್ಥಿ ಮೌಲ್ಯ ಈಗ 81.83 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಸುಮಾರು 12 ಕೋಟಿ ರೂ.ಯಷ್ಟು ಆಸ್ಥಿ ಹೆಚ್ಚಳವಾಗಿದೆ.
ಇದರ ಪೈಕಿ ನಾಯ್ಡು ಪಾಲು 3 ಕೋಟಿ ರೂ. ಆದರೆ ಪತ್ನಿಯ ಹೆಸರಿನಲ್ಲಿರುವ ಆಸ್ಥಿ ಮೌಲ್ಯ 31 ಕೋಟಿ ರೂ.ಗೆ ಏರಿಕೆಯಾಗಿದೆ. ಪುತ್ರ ನರ ಲೋಕೇಶ್ ಆಸ್ಥಿ ಮೌಲ್ಯ ಕಳೆದ ವರ್ಷ 15.21 ಕೋಟಿ ಇದ್ದರೆ ಈ ವರ್ಷ 21.40 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚು ಗಮನಾರ್ಹ ಸಂಗತಿಯೆಂದರೆ ಅವರ ಮೊಮ್ಮಗ ದೇವಾಂಶ್ ಆಸ್ಥಿ ಮೌಲ್ಯ 11.54 ಕೋಟಿ ರೂ.ನಿಂದ 18.71 ಕೋಟಿ ರೂ.ಗೆ ಏರಿಕೆಯಾಗಿದೆ. ಆತನಿಗೆ ಇನ್ನೂ 3 ವರ್ಷ ವಯಸ್ಸಷ್ಟೇ! ಆದರೂ ಸಿಎಂ ತಾತನಿಗಿಂತ ಹೆಚ್ಚು ಶ್ರೀಮಂತನಾಗಿದ್ದಾನೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.