Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ: ಪರಮೇಶ್ವರ್ ಹೇಳಿಕೆಗೆ ಕೇಂದ್ರ ಗರಂ

ಲೈಂಗಿಕ ಕಿರುಕುಳ: ಪರಮೇಶ್ವರ್ ಹೇಳಿಕೆಗೆ ಕೇಂದ್ರ ಗರಂ
ನವದೆಹಲಿ , ಮಂಗಳವಾರ, 3 ಜನವರಿ 2017 (11:19 IST)
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ನೀಡಿರುವ ಬೇಜವ್ದಾರಿ ಹೇಳಿಕೆಯನ್ನು ಕೇಂದ್ರ ಖಂಡಿಸಿದೆ.  
ಕರ್ನಾಟಕದ ಗೃಹ ಸಚಿವರ ಹೇಳಿಕೆ ನಾಚಿಕೆಗೇಡು. ಮಹಿಳೆಯರ ಮೇಲಿನ ದೌರ್ಜನ್ಯ ಕರ್ನಾಟಕದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದೆ. ನಗರ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕು ಎಂದು ಕೇಂದ್ರ ಗೃಹಖಾತೆ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. 
 
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಎಂಜಿ ರಸ್ತೆಯಲ್ಲಿ ನೆರೆದಿದ್ದ ಮಹಿಳೆಯರನ್ನು ಲೈಂಗಿಕವಾಗಿ ಹಿಂಸಿಸಿದ್ದರು. ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭದ್ರತೆಗೆಂದು ಸಾವಿರಾರು ಪೊಲೀಸರ ನಿಯೋಜನೆಗೊಂಡಿದ್ದರಾದರೂ ಕಿಡಿಗೇಡಿಗಳ ನ್ನು ನಿಯಂತ್ರಿಸಲು ವಿಫಲರಾಗಿದ್ದರು. ಈ ಘಟನೆ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. 
 
ನಿನ್ನೆ ಈ ಘಟನೆಗೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇಂತಹ ಘಟನೆಗಳನ್ನು ನಿಯಂತ್ರಿಸುವುದು ತುಂಬಾ ಕಷ್ಟ.  ಹೊಸ ವರ್ಷ, ಕ್ರಿಸ್ಮಸ್ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಈ ಸಂದರ್ಭದಲ್ಲಿ ಕಿರುಕುಳದಂತಹ ಘಟನೆಗಳು  ನಡೆಯುವುದು ಸಾಮಾನ್ಯ. ಬೆಂಗಳೂರನ್ನು ದೂಷಿಸುವುದು ಸರಿಯಲ್ಲ.ಈ ರೀತಿಯ ಕಾರ್ಯಕ್ರಮಗಳು ನಗರದಿಂದ ಹೊರವಲಯದಲ್ಲಿ ನಡೆಸಬೇಕು. ಹೊಸವರ್ಷ, ಕ್ರಿಸ್ಮಸ್ ಸಭ್ಯತೆ ತೋರುವ ಬಟ್ಟೆ ಧರಿಸುವಂತೆ ಹೇಳುವುದೂ ಅಸಾಧ್ಯ. ಆದರೆ, ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೊಣೆಗೇಡಿತನದ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯಾಗುವುದು ಪ್ರಥಮ ನೋಟದಲ್ಲಲ್ಲವಂತೆ, ಮತ್ತೆ ?