ನವದೆಹಲಿ: ಲಾಕ್ ಡೌನ್ ನ್ನು ಮೇ 3 ರವರೆಗೆ ವಿಸ್ತರಿಸುವ ನಿರ್ಧಾರ ಕೈಗೊಂಡ ಮರುದಿನವೇ ಕೇಂದ್ರ ಸರ್ಕಾರ ಕೆಲವು ಕೈಗಾರಿಕೋದ್ಯಮಗಳ ಪುನಾರರಂಭಕ್ಕೆ ಷರತ್ತು ಬದ್ಧ ಒಪ್ಪಿಗೆ ನೀಡಿದೆ.
ಮೇ 3 ರವರೆಗೆ ಎಲ್ಲಾ ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಲು ಆದೇಶಿಸಿರುವ ಸರ್ಕಾರ ಕೆಲವು ಅಗತ್ಯ ಕೈಗಾರಿಕಾ ಸ್ಥಾಪನೆಗಳ ತೆರವಿಗೆ ಅನುಮತಿ ನೀಡಿದೆ.
ಆದರೆ ಇದಕ್ಕೂ ಷರತ್ತು ವಿಧಿಸಲಾಗಿದೆ. ಮಹಾನಗರ ಪಾಲಿಕೆಯ ಹೊರಗಿರುವ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲಾಗಿರುವ ಕೈಗಾರಿಕಾ ಸ್ಥಾಪನೆಗಳನ್ನು ಮಾತ್ರ ತೆರೆಯಲು ಏಪ್ರಿಲ್ 30 ರ ಬಳಿಕ ಅನುಮತಿ ನೀಡಲಾಗಿದೆ. ಆದರೆ ಈ ಸಂದರ್ಭದಲ್ಲಿ ಕಠಿಣ ನಿಯಮಗಳನ್ನು ರೂಪಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.