Publish Date: Tue, 09 Jun 2026 (10:45 IST)
Updated Date: Tue, 09 Jun 2026 (10:48 IST)
ನವದೆಹಲಿ: ಉಜ್ವಲ್ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ. ಇನ್ನು ಮುಂದೆ ನಿಮಗೆ ಮೊದಲಿನಷ್ಟು ಸಿಲಿಂಡರ್ ಸಿಗಲ್ಲ.
ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಳಿಕ ಭಾರತದಲ್ಲೂ ಎಲ್ ಪಿಜಿ ಪೂರೈಕೆ ಏರುಪೇರಾಗಿತ್ತು. ಇದೀಗ ಕೇಂದ್ರ ಸರ್ಕಾರ ಎಲ್ ಪಿಜಿ ಪೂರೈಕೆಗೆ ಕೆಲವು ಕಠಿಣ ನಿಯಮಗಳನ್ನು ರೂಪಿಸಿದೆ. ಇದರಿಂದ ಎಲ್ಲರಿಗೂ ಎಲ್ ಪಿಜಿ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 'ಪ್ರಧಾನ ಮಂತ್ರಿ ಉಜ್ವಲ ಯೋಜನೆ'ಯನ್ನು ಜಾರಿಗೆ ತಂದಿತ್ತು. ಆದರೆ ಸದ್ಯದ ಆರ್ಥಿಕ ಹೊರೆ ನಿರ್ವಹಣೆ ಮತ್ತು ಸಬ್ಸಿಡಿ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಸಬ್ಸಿಡಿ ಸಿಲಿಂಡರ್‌ಗಳ ಕೋಟಾವನ್ನು ಕಡಿತಗೊಳಿಸಲು ಮುಂದಾಗಿದೆ ಎಂಬ ಚರ್ಚೆಗಳು ತೀವ್ರಗೊಂಡಿವೆ.
ಈ ಹಿಂದೆ ಉಜ್ವಲ ಯೋಜನೆಯಡಿ ನೋಂದಾಯಿತರಾದ ಗ್ರಾಹಕರಿಗೆ ವರ್ಷಕ್ಕೆ ಗರಿಷ್ಠ 9 ಸಿಲಿಂಡರ್‌ಗಳವರೆಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆಯುವ ಅವಕಾಶವಿತ್ತು. ಆದರೆ ಇತ್ತೀಚಿನ ತಿದ್ದುಪಡಿಗಳ ಪ್ರಕಾರ, ಇನ್ನು ಮುಂದೆ ವರ್ಷಕ್ಕೆ ಕೇವಲ ೪ ಸಿಲಿಂಡರ್‌ಗಳಿಗೆ ಮಾತ್ರ ಸಬ್ಸಿಡಿ ಸಿಗಲಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಯಾವುದೇ ಕುಟುಂಬಕ್ಕೆ ವರ್ಷಕ್ಕೆ 4 ಕ್ಕಿಂತ ಹೆಚ್ಚಿನ ಸಿಲಿಂಡರ್‌ಗಳು ಅಗತ್ಯವಿದ್ದರೆ, ಅವರು ಉಳಿದ ಸಿಲಿಂಡರ್‌ಗಳನ್ನು ಮಾರುಕಟ್ಟೆಯ ಪೂರ್ಣ ಬೆಲೆ ನೀಡಿ ಖರೀದಿಸಬೇಕಾಗುತ್ತದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ