Select Your Language

Notifications

webdunia
webdunia
webdunia
webdunia

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್
ನವದೆಹಲಿ , ಭಾನುವಾರ, 10 ಸೆಪ್ಟಂಬರ್ 2017 (19:12 IST)
ಏರ್ ಪೋರ್ಟ್, ಮೆಟ್ರೋ ರೈಲು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

ವಿಮಾನಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ಮೇಲೆ ಭಯೋತ್ಪಾದಕರು ಕೆಮಿಕಲ್ ದಾಳಿಗೆ ಉದ್ದೇಶಿಸಿರುವ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ದೇಶಾದ್ಯಂತ ಹೈ ಅಲರ್ಟ್`ಗೆ ಗೃಹ ಇಲಾಖೆ ಸೂಚಿಸಿದೆ. ಭದ್ರತಾ ವ್ಯವಸ್ಥೆ ಬಲಪಡಿಸುತ್ತಿದ್ದಂತೆ ಉಗ್ರರು ದಾಳಿಗೆ ಹೊಸ ಹೊಸ ದಾರಿಗಳನ್ನ ಹುಡುಕುತ್ತಿದ್ದಾರೆ. ಇದರ ಮುಂದುವರೆದ ಭಾಗವೇ ಕೆಮಿಕಲ್ ಅಟ್ಯಾಕ್.

ವಿಷಾನಿಲ ಪ್ರಯೋಗ, ಕೀಟನಾಶಕಗಳ ಸಿಂಪಡಣೆ, ಆಸಿಡ್ ಬಳಕೆ,ತಂಪು ಪಾನೀಯಗಳಿಗೆ ವಿಷ ಹಾಕುವುದು ಈ ರೀತಿಯ ಕೆಮಿಕಲ್ ಯುದ್ಧಕ್ಕೆ ಭಯೋತ್ಪಾದಕರು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿದೆ. ಅದರಲ್ಲೂ ಬಸ್, ವಿಮಾನ, ಮೆಟ್ರೋ ರೈಲಿನಂತಹ ಬಾಗಿಲು ಮುಚ್ಚಿದ ಪ್ರದೇಶಗಳಲ್ಲಿ ವಿಷಾನಿಲ ಪ್ರಭಾವ ಹೆಚ್ಚಿರುತ್ತದೆ. ಇಲ್ಲಿ ವಿಧ್ವಂಸಕ ಕೃತ್ಯ ನಡೆಸಿ ಅಧಿಕ ಜನರನ್ನ ಬಲಿ ಪಡೆಯುವುದು ಉಗ್ರರ ಪ್ಲಾನ್.

ಈ ಹಿಂದೆ ಇರಾನಿನಲ್ಲಿ ಐಸಿಸ್ ಉಗ್ರರು ನಡೆಸಿದ ವಿಷಾನಿಲ ದಾಳಿಯಲ್ಲಿ ನೂರಾರು ಮುಗ್ಧರು ಪ್ರಾಣಬಿಟ್ಟಿದ್ದರು. ವಿಷಾನಿಲ ಅಷ್ಟು ಅಪಾಯವೆಂದರೆ, ಕೆಲ ಪ್ರಭಾವಶಾಲಿ ಅನಿಲಗಳು ಕ್ಷಣಮಾತ್ರದಲ್ಲಿ ಪ್ರಾಣ ತೆಗೆಯುತ್ತವೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೌರಿ ಲಂಕೇಶ್ ಹಂತಕರ ಪತ್ತೆಗೆ ಪೊಲೀಸರ ತಂತ್ರ