Select Your Language

Notifications

webdunia
webdunia
webdunia
webdunia

ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಮನೆ ಮೇಲೆ ಸಿಬಿಐ ದಾಳಿ

ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ಮನೆ ಮೇಲೆ ಸಿಬಿಐ ದಾಳಿ
ರೋಹ್ಟಕ್ , ಶನಿವಾರ, 3 ಸೆಪ್ಟಂಬರ್ 2016 (11:07 IST)
ಹರ್ಯಾಣದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಶನಿವಾರ ದಾಳಿ ನಡೆದಿದೆ. ದೆಹಲಿಗೆ 45 ಕಿಮೀ ದೂರದ ಮನೇಶ್ವರದಲ್ಲಿ ಭೂಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಈ ದಾಳಿ ನಡೆಸಿತು.

ದೆಹಲಿ, ಚಂದೀಗಢ, ರೋಹ್ಟಕ್ ಮತ್ತು ಗುರುಗ್ರಾಮ್‌ನ 20 ಸ್ಥಳಗಳಲ್ಲಿ ನಡೆಸಿದ ದಾಳಿಗಳಲ್ಲಿ ಸಿಬಿಐ ಉನ್ನತ ಆಡಳಿತಾಧಿಕಾರಿ ಎಸ್.ಎಸ್.ಧಿಲ್ಲಾನ್ ಮತ್ತು ಇಬ್ಬರು ಮಾಜಿ ಅಧಿಕಾರಿಗಳಾದ ತಯಾಲ್ ಮತ್ತು ಚತ್ತರ್ ಸಿಂಗ್ ಅವರ ಮನೆ ಮತ್ತು ಕಚೇರಿಗಳನ್ನು ಕೂಡ ಸಿಬಿಐ ತಲಾಶ್ ಮಾಡಿದೆ.
 
ಇಂದು ಬೆಳಿಗ್ಗೆ ಹರ್ಯಾಣದ ರೋಹ್ಟಕ್‌ನಲ್ಲಿರುವ ಹೂಡಾ ಮನೆಗೆ ಸಿಬಿಐ ತಂಡ ಆಗಮಿಸಿತು. 2004 ಮತ್ತು 2007ರ ನಡುವೆ ಮನೇಸರ್‌ನಲ್ಲಿ 400 ಎಕರೆ ಭೂಮಿಯ ಮಂಜೂರಾತಿಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ಸಿಬಿಐ ದಾಳಿ ನಡೆದಿದೆ. ಗ್ರಾಮಸ್ಥರಿಂದ ಈ ಭೂಮಿಯನ್ನು ತೀರಾ ಅಗ್ಗದ ದರಕ್ಕೆ ಖರೀದಿಸಲಾಗಿತ್ತೆಂದು ಆರೋಪಿಸಲಾಗಿದೆ.ಈ ಭೂಮಿಯನ್ನು ಖಾಸಗಿ ಬಿಲ್ಡರ್‌ಗಳಿಗೆ ಬಳಿಕ ಮಾರಾಟ ಮಾಡಲಾಗಿತ್ತೆಂದು ಆರೋಪಿಸಲಾಗಿದೆ. ಈ ವಹಿವಾಟಿನಲ್ಲಿ ಗ್ರಾಮಸ್ಥರು ಸುಮಾರು 1500 ಕೋಟಿ ರೂ. ಕಳೆದುಕೊಂಡಿದ್ದರು. ಹೂಡಾ 2014ರವರೆಗೆ 10 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಮಾಲಕಿಗೆ ಚಾಕುವಿನಿಂದ ಇರಿದು ಚಿನ್ನಾಭರಣ ಕಸಿದು ಪರಾರಿ