ಕಾವೇರಿ ವಿವಾದ: ಕೆಆರ್‌ಎಸ್ ಡ್ಯಾಂ ಸುತ್ತ ಭಾರೀ ಬಿಗಿ ಪೊಲೀಸ್ ಭದ್ರತೆ
ಬೆಂಗಳೂರು , ಸೋಮವಾರ, 5 ಸೆಪ್ಟಂಬರ್ 2016 (10:58 IST)
ಕಾವೇರಿ ನದಿ ನೀರು ಸಂಬಂಧ ಇಂದು ಸುಪ್ರಿಂ ಕೋರ್ಟ್‌ನಲ್ಲಿ ಇಂದು ಆದೇಶ ಹೊರಬೀಳಲಿದೆ. ಆದ್ದರಿಂದ ಕೆಆರ್‌ಎಸ್ ಜಲಾಶಯದ ಸುತ್ತ ಮುತ್ತ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಸುಪ್ರಿಂನಲ್ಲಿ ಇಂದು ಆದೇಶ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
5 ಕೆಎಸ್ ಆರ್‌ಪಿ, 2 ಡಿಎಆರ್ ಭದ್ರತಾ ಸಿಬ್ಬಂದಿ, ಕರ್ನಾಟಕ ಕೈಗಾರಿಗಾ ಭದ್ರತಾ ಪಡೆಯ 50 ಸಿಬ್ಬಂದಿಗಳು ಕೆಆರ್‌ಎಸ್ ಡ್ಯಾಂ ಸುತ್ತ ನಿಯೋಜನೆ ಮಾಡಲಾಗಿದೆ. ತಮಿಳುನಾಡು ಅರ್ಜಿಯ ಸಂಬಂಧ ಇಂದು ಆದೇಶ ಪ್ರಕಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ 50 ಸ್ಥಳೀಯ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.
ಕರ್ನಾಟಕ ವಿರುದ್ಧ ತಮಿಳುನಾಡು ಸಲ್ಲಿಸಿರುವ ತಕರಾರು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಸುಪ್ರಿಂ ಕೋರ್ಟ್ ಪೀಠದ ಮುಂದೆ ವಿಚಾರಣೆ ಇವತ್ತು ಮುಂದುವರಿಯಲಿದೆ. ರಾಜ್ಯ ಸರ್ಕಾರ ಸುಪ್ರಿಂ ಕೋರ್ಟ್ ಮುಂದೆ ಕಾವೇರಿ ಜಲ ಪರಿಸ್ಥಿತಿ ಬಗ್ಗೆ ವಾಸ್ತವಾಂಶವನ್ನು ಮನವರಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದೆ.
ಕಳೆದ ಶುಕ್ರವಾರ ಈ ಕುರಿತು ವಿಚಾರಣೆ ಪ್ರಾರಂಭಿಸಿದ್ದ ನ್ಯಾಯಪೀಠ ಉಭಯ ರಾಜ್ಯಗಳ ವಾದವನ್ನ ಆಲಿಸಿತ್ತು. ಪರಸ್ಪರ ಸೌಹಾರ್ದ ಭಾವದಿಂದ ಪ್ರಕರಣ ಬಗೆಹರಿಸಿಕೊಳ್ಳುವಂತೆ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಮುಂಡೂಡಿದ್ದರು.
ಮುಂದಿನ ಸುದ್ದಿ