Select Your Language

Notifications

webdunia
webdunia
webdunia
webdunia

ಬಿಹಾರ್: ಮದ್ಯ ಸೇವಿಸಿ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಯು ಶಾಸಕ

ನಿತೀಶ್ ಕುಮಾರ್
ಪಾಟ್ನಾ , ಬುಧವಾರ, 13 ಜುಲೈ 2016 (19:45 IST)
ಬಿಹಾರ್ ರಾಜ್ಯದಲ್ಲಿ ಮದ್ಯಮಾರಾಟಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನಿಷೇಧ ಹೇರಿದ್ದರೂ ಜೆಡಿಯು ಪಕ್ಷದ ಮಾಜಿ ಶಾಸಕನೊಬ್ಬ ಕುಡಿದ ಮತ್ತಿನಲ್ಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿ ತೊಂದರೆಗೆ ಸಿಲುಕಿದ್ದಾರೆ. 
 
ವರದಿಗಳ ಪ್ರಕಾರ, ಔರಂಗಾಬಾದ್ ಜಿಲ್ಲೆಯ ಮಾಜಿ ಶಾಸಕರಾದ ಲಲನ್ ರಾಮ್, ಮದ್ಯ ಸೇವಿಸಿದ ಮತ್ತಿನಲ್ಲಿ ಬಿಹಾರ್ ಸಿಎಂ ರಾಜ್ಯದಲ್ಲಿ ಮದ್ಯ ನಿಷೇಧ ಹೇರಿದ್ದಕ್ಕೆ ಮನಬಂದಂತೆ ಟೀಕಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.   
 
ಏತನ್ಮಧ್ಯೆ, ಮದ್ಯ ಸೇವಿಸಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ವಿಡಿಯೋ ವೈರಲ್ ಆಗಿದೆ ಎಂದು ತಿಳಿದ ಶಾಸಕ ಲಲನ್ ರಾಮ್, ಇದೊಂದು ವಿರೋಧಿಗಳ ಷಡ್ಯಂತ್ರ ಎಂದು ಉಲ್ಟಾ ಹೊಡೆದಿದ್ದಾನೆ. 
 
ಮಾಜಿ ಶಾಸಕ ಲಲನ್ ರಾಮ್ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಹಳೆಯ ವಿಡಿಯೋ . ಕೇವಲ ನನ್ನ ಗೌರವಕ್ಕೆ ಸಾರ್ವಜನಿಕರ ಎದುರಲ್ಲಿ ಮಸಿ ಬಳೆಯುವ ದೃಷ್ಟಿಯಿಂದ ವಿಡಿಯೋ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
  
ಮತ್ತೊಂದೆಡೆ, ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಪಕ್ಷಗಳು ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧ ಸಂಪೂರ್ಣ ವಿಫಲವಾಗಿದೆ ಎಂದು ಬಿಹಾರ್ ಸಿಎಂ ನಿತೀಶ್ ಕುಮಾರ್ ವಿರುದ್ಧ ಕಿಡಿಕಾರಿವೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಚುನಾವಣೆ ಆಯೋಗದಿಂದ ಓವೈಸಿ ಪಕ್ಷಕ್ಕೆ ನಿಷೇಧ