Webdunia - Bharat's app for daily news and videos

Install App

ಕಾಂಗ್ರೆಸ್ ಸಂಸದನ ಆಸನದಲ್ಲಿ ನೋಟಿನ ಕಂತೆ ಪತ್ತೆ: ರಾಜ್ಯಸಭೆಯಲ್ಲಿ ಕೋಲಾಹಲ, ತನಿಖೆಗೆ ಆದೇಶ

Sampriya
ಶುಕ್ರವಾರ, 6 ಡಿಸೆಂಬರ್ 2024 (13:58 IST)
ನವದೆಹಲಿ: ಚಳಿಗಾಲದ ಅಧಿವೇಶನದ ಆರಂಭದಲ್ಲೇ ಹಲವು ನಾಟಕೀಯ ಬೆಳವಣಿಗೆಗಳಿಗೆ ರಾಜ್ಯಸಭೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸಂಸದನ ಆಸನದಲ್ಲಿ ಹಣದ ಕಂತೆ ಪತ್ತೆಯಾಗಿರುವುದು ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದ್ದಾರೆ.

ಗುರುವಾರ ಸದನವನ್ನು ಮುಂದೂಡಿದ ಬಳಿಕ ಪರಿಶೀಲನೆ ವೇಳೆ ಆಸನ ಸಂಖ್ಯೆ 222ರಲ್ಲಿ ಭದ್ರತಾ ಸಿಬ್ಬಂದಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸದನಕ್ಕೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದು ಬಂದಿಲ್ಲ. ಸದನದ ಶಿಷ್ಟಾಚಾರದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಗದೀರ್ ಧನಕರ್ ಅವರು ಮಾಹಿತಿ ನೀಡಿದ್ದಾರೆ.

ಯಾರಾದರೂ ಕರೆನ್ಸಿ ನೋಟುಗಳು ತಮ್ಮದು ಎಂದು ಕೇಳುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೆ. ಆದರೆ ಯಾರೂ ಅದನ್ನು ಇಲ್ಲಿಯವರೆಗೆ ತಮ್ಮದೆಂದು ಒಪ್ಪಿಕೊಂಡಿಲ್ಲ. ಜನರು ಅದನ್ನು ಮರೆತುಬಿಡುವ ಆರ್ಥಿಕತೆಯ ಸ್ಥಿತಿಯನ್ನು ಇದು ಪ್ರತಿಬಿಂಬಿಸುತ್ತದೆಯೇ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.

ಸಂಸದ ತಿರುಗೇಟು: ಧನಕರ್ ಅವರ ಆರೋಪಕ್ಕೆ ಸಂಸದ ಸಿಂಘ್ವಿ ತಿರುಗೇಟು ನೀಡಿದ್ದು, 'ಇದನ್ನು ಕೇಳಿ ಆಶ್ಚರ್ಯವಾಯಿತು. ನಾನು ನಿನ್ನೆ ಮಧ್ಯಾಹ್ನ 12.57 ಕ್ಕೆ ಸದನದ ಒಳಗೆ ಪ್ರವೇಶ ಮಾಡಿದೆ. 1 ಗಂಟೆಗೆ ಸದನ ಆರಂಭವಾಯಿತು. ಮಧ್ಯಾಹ್ನ 1 ರಿಂದ 1:30 ರವರೆಗೆ ನಾನು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕುಳಿತುಕೊಂಡೆ.

ಅಂತೆಯೇ ಆ ಹಣ ನನ್ನದಲ್ಲ.. ಖಂಡಿತವಾಗಿ ಬೇರಾರೋ ಅದನ್ನು ತಂದು ನನ್ನ ಆಸನದ ಬಳಿ ಇಟ್ಟು ಹೋಗಿರಬಹುದು. ಈ ಬಗ್ಗೆ ವಿಚಾರಣೆ ನಡೆಯಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ಆಸನವನ್ನು ಲಾಕ್ ಮಾಡಬಹುದಾದ ಮತ್ತು ಕೀಲಿಯನ್ನು ಸಂಸದರು ಮನೆಗೆ ಒಯ್ಯಬಹುದಾದ ಆಸನವನ್ನು ಹೊಂದಿರಬೇಕು ಎಂದು ಸಿಂಘ್ವಿ ವ್ಯಂಗ್ಯ ಮಾಡಿದರು.

ಇನ್ನು ರಾಜ್ಯಸಭೆಯಲ್ಲಿ ಸಭಾಪತಿ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ತನಿಖೆ ಪೂರ್ಣಗೊಳ್ಳದ ಹೊರತು ಸಭಾಪತಿ ಸದಸ್ಯರ ಹೆಸರು ಹೇಳಬಾರದಿತ್ತು ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

India Pakistan: ಜವಹರಲಾಲ್ ನೆಹರೂ ಪಾಕಿಸ್ತಾನಕ್ಕೆ ನೀರು ಮಾತ್ರವಲ್ಲ ಹಣವನ್ನೂ ಕೊಟ್ಟಿದ್ದರು

ಬೆಂಗಳೂರು ಮಳೆಯಲ್ಲಿ ಮುಳುಗಿರುವಾಗ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ

DK Shivakumar: ನೀವು ಮನೆ ಸರಿಯಾಗಿ ಕಟ್ಟಿಕೊಳ್ಬೇಕು, ಆಗ ನೀರು ಬರಲ್ಲ: ಡಿಕೆ ಶಿವಕುಮಾರ್

Bengaluru Rains: ಬೆಳಿಗ್ಗೆಯಿಂದಲೇ ಶುರು ಮಳೆ, ಕಚೇರಿಗೆ ಹೋಗುವವರು ಗಮನಿಸಿ

DK Shivakumar: ಗೃಹಲಕ್ಷ್ಮಿ ಹಣ ಪ್ರತೀ ತಿಂಗಳು ಕೊಡ್ತೀವಿ ಅಂದಿಲ್ಲ ಎಂದ ಡಿಕೆಶಿ: ಪ್ರತೀ ತಿಂಗಳು ಅಂದ್ರೆ ಏನರ್ಥ

ಮುಂದಿನ ಸುದ್ದಿ
Show comments