Select Your Language

Notifications

webdunia
webdunia
webdunia
webdunia

ಮೋದಿಜೀ, ನನ್ನ ಗೆಳತಿಯೊಂದಿಗೆ ವಿವಾಹವಾಗಲು ಸಹಾಯ ಮಾಡಬಹುದೇ?

ಮೋದಿಜೀ, ನನ್ನ ಗೆಳತಿಯೊಂದಿಗೆ ವಿವಾಹವಾಗಲು ಸಹಾಯ ಮಾಡಬಹುದೇ?
ಚಂಡೀಗಢ್ , ಭಾನುವಾರ, 7 ಮೇ 2017 (14:42 IST)
ಸ್ಥಳೀಯ ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ನರ್ಸ್ ವೃತ್ತಿಯಲ್ಲಿರುವ ಗರ್ಲ್‌ಫ್ರೆಂಡ್‌‌ನೊಂದಿಗೆ ವಿವಾಹವಾಗಲು ನೆರವಾಗಿ ಎಂದು ಕೋರಿದ್ದಾನೆ
 
ಪ್ರಧಾನಿ ಮೋದಿಯವರೆ, ನಮ್ಮ ಮದುವೆಗೆ ಒಪ್ಪಿಗೆ ನೀಡುವಂತೆ ಎರಡೂ ಕಡೆ ಪೋಷಕರನ್ನು ಮನವೊಲಿಸಲು ಚಂಡೀಗಢಕ್ಕೆ ಸ್ವಯಂಸೇವಕರನ್ನು ಕಳುಹಿಸಿ. ಪ್ರಧಾನ ಮಂತ್ರಿ ಮನವಿ ಮಾಡಿದ್ದಾರೆ. ಇಲ್ಲ, ಇದು ಸಿಲ್ಲಿ ಜೋಕ್ ಅಲ್ಲ. ಚಂಡೀಗಢದಿಂದ ಬಂದ ಇಂತಹ ಪ್ರಚಂಡ ಮನವಿಗಳ ಪೈಕಿ ಒಂದಾಗಿದೆ. ಪ್ರತಿದಿನ ಕೇಂದ್ರೀಕೃತ ಸಾರ್ವಜನಿಕ ದೂರು ಪರಿಹಾರ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ಇದು ಪ್ರಧಾನಿ ಕಚೇರಿಗೆ (PMO) ಕಳುಹಿಸಲಾಗಿದೆ. 
 
ಸುಮಾರು 60% ದೂರುಗಳು ಮತ್ತು ವಿನಂತಿಗಳು ನಿಷ್ಪ್ರಯೋಜಕವಾಗಿದ್ದು, ನಮ್ಮ ಮುಖದ ಮೇಲೆ ಕಿರುನಗೆ ತರುತ್ತವೆ. ಉದಾಹರಣೆಗೆ, ಇದು ಕೇವಲ 114 ಚದರ ಕಿ.ಮೀ ವ್ಯಾಪ್ತಿಯ ಭೌಗೋಳಿಕ ಹರಡುವಿಕೆಯನ್ನು ಹೊಂದಿರುವ ನಗರ ಮತ್ತು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದರೂ ಒಬ್ಬ ನಿವಾಸಿ, ಪ್ರಧಾನಿಗೆ ಪತ್ರ ಬರೆದು ಚಂಡೀಗಢ ಪೊಲೀಸರಿಗೆ ಹೆಲಿಕಾಪ್ಟರ್ ಒದಗಿಸಿದಲ್ಲಿ ಅಧಿಕಾರಿಗಳು ಅಪರಾಧದ ಸ್ಥಳವನ್ನು ಬೇಗ ತಲುಪಬಹುದು ಎಂದು ಮನವಿ ಮಾಡಿದ್ದಾನೆ. 
 
ಮತ್ತೊಬ್ಬ ನಿವಾಸಿ, ನನ್ನ ಅನುಮತಿಯಿಲ್ಲದೆ ಕೆಲವರು ತೋಟದಲ್ಲಿ ಹೂವುಗಳನ್ನು ಕಿತ್ತುಹಾಕುತ್ತಿದ್ದಾರೆ. ಯಾರೂ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಎದುರಲ್ಲೇ ಪತ್ನಿಯ ಮೇಲೆ ಎಂಟು ಕಾಮುಕರಿಂದ ಗ್ಯಾಂಗ್‌ರೇಪ್