Select Your Language

Notifications

webdunia
webdunia
webdunia
webdunia

26/11 ದಾಳಿ ಹೀರೋ ಸೀಸರ್ ಇನ್ನಿಲ್ಲ

26/11 ದಾಳಿ ಹೀರೋ ಸೀಸರ್ ಇನ್ನಿಲ್ಲ
ಮುಂಬೈ , ಶುಕ್ರವಾರ, 14 ಅಕ್ಟೋಬರ್ 2016 (12:04 IST)
2011ರಲ್ಲಿ ನಡೆದ ಮುಂಬೈ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ನೂರಾರು ಅಮಾಯಕರ ಪ್ರಾಣ ಕಾಪಾಡಿದ್ದ  ಪೊಲೀಸ್ ನಾಯಿ ಲ್ಯಾಬ್ರಡಾರ್ ಜಾತಿಯ ಸೀಸರ್ ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ. 
11 ವರ್ಷದ ಸೀಸರ್ ಮುಂಬೈ ತಾಜ್ ಮೇಲೆ ನಡೆದ ಉಗ್ರ ದಾಳಿಯ ವಿರುದ್ಧ ನಡೆದ ಕಾರ್ಯಾಚರಣೆಯ ನಾಲ್ಕು ಹೀರೋ(ನಾಯಿ)ಗಳಲ್ಲಿ ಉಳಿದುಕೊಂಡಿದ್ದ ಏಕೈಕ ಸದಸ್ಯನಾಗಿದ್ದ. ಇತರ ಮೂವರಾದ ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಇದೇ ವರ್ಷ ಒಬ್ಬರಾದ ಮೇಲೆ ಒಬ್ಬರಂತೆ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದ್ದರು.  ಜುಲೈ ಅಂತ್ಯದಲ್ಲಿ ಟೈಗರ್ ಸಾವಿನ ಬಳಿಕ ಖಿನ್ನನಾಗಿದ್ದ ಸೀಸರ್, ಇತ್ತೀಚಿಗೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಸೀಸರ್ ಇತ್ತೀಚಿಗೆ ಚೇತರಿಸಿಕೊಂಡಿದ್ದರಿಂದ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು. ಆದರೆ ನಿನ್ನೆ ತಡರಾತ್ರಿ ವಿಧಿವಶನಾಗಿದ್ದಾನೆ. 
 
ಫಿಜಾ ಶಾ ಎಂಬುವವರ ಆರೈಕೆಯಲ್ಲಿ ಸೀಸರ್ ಸಾವಿಗೆ ಮುಂಬೈ ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ರಾಷ್ಟ್ರಧ್ವಜ ಹೊರಿಸಿ ಆತನ ಸಂಸ್ಕಾರವನ್ನು ನಡೆಸಿ ಭಾವಪೂರ್ಣ ವಿದಾಯವನ್ನು ನೀಡಲಾಗಿದೆ. 
 
ಸೀಸರ್ ನೆನಪು ಮೆಯಲಾಗದ್ದು, ಆತನನ್ನು ಹೇಳತೀರದಷ್ಟು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಾಗುತ್ತಾರೆ ಮುಂಬೈ ಪೊಲೀಸ್ ಸಿಬ್ಬಂದಿ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಸಂಬಳ ಎಷ್ಟು ಗೊತ್ತಾ?