Select Your Language

Notifications

webdunia
webdunia
webdunia
webdunia

ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆ

ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆ
ನವದೆಹಲಿ , ಶುಕ್ರವಾರ, 15 ಏಪ್ರಿಲ್ 2022 (10:46 IST)
ಗಾಂಧಿನಗರ : ಗಂಟೆಗೆ 350 ಕಿಲೋಮೀಟರ್ ವೇಗದಲ್ಲಿ ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆಗೆ ಸೂರತ್ನಲ್ಲಿ ಸಿದ್ಧತೆ ನಡೆಸಲಾಗುತ್ತಿದ್ದು, ಇದು ವಿಮಾನಗಳ ಟೇಕ್ ಆಫ್ ವೇಗಕ್ಕೆ ಸಮನಾಗಿರುತ್ತದೆ ಎಂದು ವರದಿಯಾಗಿದೆ.

2026ರಲ್ಲಿ ಗುಜರಾತ್ನ ಬಿಲಿಮೋರಾ ಮತ್ತು ಸೂರತ್ ನಡುವೆ ಗಂಟೆಗೆ 350 ಕಿಮೀ ವೇಗದಲ್ಲಿ ಬುಲೆಟ್ ರೈಲಿನ ಮೊದಲ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮೊದಲು ಬಿಲಿಮೋರಾ ಮತ್ತು ಸೂರತ್ ನಡುವೆ ಪ್ರಾಯೋಗಿಕ ಪರೀಕ್ಷೆ ನಂತರ ಇತರ ಭಾಗಗಳಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 

ಇದು ಪ್ರಯಾಣಿಕರಿಗೆ ಗೇಮ್ ಚೇಂಜರ್ ಆಗಿರುತ್ತದೆ ಮತ್ತು ವಿಮಾನ ಪ್ರಯಾಣಕ್ಕೆ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಬುಲೆಟ್ ರೈಲುಗಳು ಕಡಿಮೆ ಚೆಕ್ ಇನ್ ಸಮಯದಲ್ಲಿ ಹೆಚ್ಚು ಸ್ಥಳಗಳ ಸಂಪರ್ಕ ಸಾಧಿಸಲು ಪ್ಲಾನ್ ರೂಪಿಸಲಾಗಿದೆ.

ಪ್ರಸ್ತುತ ಗಂಟೆಗೆ 350 ಕಿಮೀ ವೇಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದರೂ ಈ ವೇಗದಲ್ಲಿ ರೈಲುಗಳು ಸಂಚರಿಸುವುದಿಲ್ಲ. ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಮೀ ಆಗಿರುತ್ತದೆ. ಬುಲೆಟ್ ರೈಲು ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಎಂಬ ವಿಶೇಷ ಟ್ರ್ಯಾಕ್ಗಳಲ್ಲಿ ಚಲಿಸುತ್ತವೆ.

ಜಪಾನ್ ತಂತ್ರಜ್ಞಾನದ ನೆರವಿನಿಂದ ಇದನ್ನು ರೂಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಶಾಲೆಗಳಿಗೆ ಹೊಸ ಮಾರ್ಗಸೂಚಿ