Select Your Language

Notifications

webdunia
webdunia
webdunia
webdunia

ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಬಿಐ ಮೇಲೆ ಹೇರಿದ್ದ ತಡೆ ತೆರವು

ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಸಿಬಿಐ ಮೇಲೆ ಹೇರಿದ್ದ ತಡೆ ತೆರವು
ನವದೆಹಲಿ , ಗುರುವಾರ, 8 ಸೆಪ್ಟಂಬರ್ 2016 (16:23 IST)
ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದ್ದ ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಯ ಮೇಲೆ ಹೇರಿದ್ದ ತಡೆಯನ್ನು ಸುಪ್ರೀಂಕೋರ್ಟ್ ಗುರುವಾರ ತೆರವುಗೊಳಿಸಿದೆ. 

ನ್ಯಾಯಾಲಯದ ತಡೆ ತನಿಖೆಯ ಮೇಲೆ ಪರಿಣಾಮ ಬೀರಲಿದೆ. ಇದು ಅಪರಾಧಿಗಳಿಗೆ ಅನುಕೂಲವನ್ನುಂಟು ಮಾಡುವ ಸಾಧ್ಯತೆಗಳಿವೆ. 90 ದಿನಗಳೊಳಗೆ ಚಾರ್ಜ್‌ಶೀಟ್ ದಾಖಲಿಸದಿದ್ದರೆ ಅವರು ಜಾಮೀನು ಪಡೆಯುವ ಹಾದಿ ಸುಗಮವಾಗಬಹುದು ಎಂದು ಸಿಬಿಐ, ಕೋರ್ಟ್ ಮುಂದೆ ವಾದಿಸಿತ್ತು. 
 
ರೇಪ್ ಪೀಡಿತೆಯ ಪತಿ ಪ್ರಕರಣವನ್ನು ಉತ್ತರಪ್ರದೇಶದ ಹೊರಗೆ ವರ್ಗಾಯಿಸಲು ಮನವಿ ಮಾಡಿದ್ದರಿಂದ ದೀಪಕ್ ಮಿಶ್ರಾ ನೇತೃತ್ವದ ನ್ಯಾಯ ಪೀಠ ಸಿಬಿಐ ತನಿಖೆಗೆ ತಡೆ ಒಡ್ಡಿತ್ತು
 
ಗ್ಯಾಂಗ್ ರೇಪ್ ರಾಜಕೀಯ ಪಿತೂರಿಯಾಗಿರಬಹುದು ಎಂದು ಹೇಳಿಕೆ ನೀಡಿದ್ದ ಉತ್ತರ ಪ್ರದೇಶ್ ಸಚಿವ ಅಜಂ ಖಾನ್ ಹೇಳಿಕೆಯನ್ನು ಖಂಡಿಸಿದ ಕೋರ್ಟ್ ಸೆಪ್ಟೆಂಬರ್ 29 ರಂದು ವಿಚಾರಣೆಯನ್ನು ನಿಗದಿ ಪಡಿಸಿದೆ. 
 
ಸುಪ್ರೀಂಕೋರ್ಟ್‌ನ ತಡೆಯನ್ನು ತೆರವುಗೊಳಿಸಿರುವುದರಿಂದ ಇದೇ ಸೆಪ್ಟೆಂಬರ್ 29ರೊಳಗೆ ಸಿಬಿಐ ಎಲ್ಲ ಬಂಧಿತ ಆರೋಪಿಗಳ ಮೇಲೆ  
ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
 
ಕಳೆದ ಜುಲೈ 29 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಮೇಲೆ ದಾಳಿ ಮಾಡಿದ್ದ ದರೋಡೆಕೋರರ ಗುಂಪೊಂದು ಅದರಲ್ಲಿದ್ದ ತಂದೆ- ಮಗನನ್ನು ಕಟ್ಟಿ ಹಾಕಿ, ತಾಯಿ ಮತ್ತು ಅಪ್ರಾಪ್ತ ಮಗಳನ್ನು ಹತ್ತಿರದ ಹೊಲಕ್ಕೆ ಕೊಂಡೊಯ್ದು ಗನ್ ತೋರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. 
 
ಈ ಪ್ರಕರಣ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಬಂದ್‌ನಲ್ಲಿ ಶಾಂತಿ ಕದಡಿದರೆ ವಾಟರ್ ಜೆಟ್ ಪ್ರಯೋಗ: ಪೊಲೀಸ್ ಆಯುಕ್ತ ಮೇಘರಿಕ್