Publish Date: Fri, 15 Sep 2017 (09:01 IST)
Updated Date: Fri, 15 Sep 2017 (12:55 IST)
ಶ್ರೀನಗರ: ಪಾಕಿಸ್ತಾನ ಮತ್ತೆ ಗಡಿಯಲ್ಲಿ ತನ್ನ ಕ್ಯಾತೆ ಮುಂದುವರಿಸಿದ್ದು, ಗಡಿ ಭದ್ರತಾ ಪಡೆಯ ಓರ್ವ ಯೋಧನನ್ನು ಹೊಡೆದುರುಳಿಸಿದೆ. ಆರ್ ಎಸ್ ಪುರಾ ಸೆಕ್ಟರ್ ನಲ್ಲಿ ಪಾಕ್ ಪಡೆಗಳು ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ಓರ್ವ ನಾಗರಿಕ ಗಾಯಗೊಂಡಿದ್ದಾನೆ. ಐದು ದಿನಗಳ ಹಿಂದಷ್ಟೇ ಪಾಕಿಸ್ತಾನ ಗಡಿ ಉಲ್ಲಂಘಿಸಿ ದಾಳಿ ನಡೆಸಿತ್ತು.
ಅರ್ನಿಯಾ ಪ್ರದೇಶದ ಬಿಎಸ್ಎಫ್ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಸೈನಿಕರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಓರ್ವ ನಾಗಿರಕನಿಗೆ ಗಾಯವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಇದೀಗ ಗಡಿ ಭದ್ರತಾ ಪಡೆಗಳು ಜಾಗೃತರಾಗಿದ್ದು, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಲಾಗಿದೆ.