ರುಚಿಕರವಾದ ಬ್ರಿಂಜಾಂಲ್ ಕರ್ಡ್ಸ್ ಗ್ರೇವಿ ಮಾಡುವ ಬಗೆ
ಬೇಕಾಗುವ ಸಾಮಾಗ್ರಿಗಳು:
* ಚಿಕ್ಕ ಬದನೆಕಾಯಿ 7-8
* ಈರುಳ್ಳಿ 1 (ಪೇಸ್ಟ್ ಮಾಡಬೇಕು)
* ಹಸಿಮೆಣಸಿನ ಕಾಯಿ 2-3
* ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಅರಿಶಿಣ ಪುಡಿ ಅರ್ಧ ಚಮಚ
* ಸಕ್ಕರೆ 1 ಚಮಚ
* ಕೊತ್ತಂಬರಿ ಪುಡಿ 1 ಚಮಚ
* ಮೊಸರು 2 ಕಪ್
* ಕೊತ್ತಂಬರಿ ಸೊಪ್ಪು ಸ್ವಲ್ಪ
* 1 ಕಪ್ ಎಣ್ಣೆ
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ: * ಬದನೆಕಾಯಿಯನ್ನು ಮಧ್ಯಭಾಗದಿಂದ 4-5 ತುಂಡುಗಳಾಗಿ ಕತ್ತರಿಸಕೊಳ್ಳಿ. ನಂತರ ಅದರ ಒಳಗೆ ಸ್ವಲ್ಪ ಸಕ್ಕರೆ ಉಪ್ಪು ಹಾಗೂ ಅರಿಶಿಣ ಪುಡಿಯನ್ನು ಹಾಕಿಡಿ.
ಈಗ ಈರುಳ್ಳಿಯನ್ನು ಸಪರೇಟ್ ಆಗಿ ಹಾಗೂ ಬೆಳ್ಳುಳ್ಳಿ- ಶುಂಠಿ ಪೇಸ್ಟ್ ಗಳನ್ನು ತಯಾರಿಸಿಟ್ಟುಕೊಳ್ಳಿ
* ನಂತರ ಬದನೆಕಾಯಿಯನ್ನು ಡೀಪ್ ಫ್ರೈ ಮಾಡಿ.
* ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ಹುರಿಯಿರಿ.
* ನಂತರ ಹಸಿಮೆಣಸಿನಕಾಯಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
* ಈಗ ಗಟ್ಟಿ ಮೊಸರು ಹಾಕಿ ಚೆನ್ನಾಗಿ ತಿರುಗಿಸಬೇಕು. ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಸ್ವಲ್ಪ ಹೊತ್ತು ಸೌಟ್ ನಿಂದ ಕುದಿಸಬೇಕು. ನಂತರ ಫ್ರೈ ಮಾಡಿದ ಬದನೆಕಾಯಿ ಅದರಲ್ಲಿ ಹಾಕಿ 2 ನಿಮಿಷ ಕುದಿಸಿ ಅದನ್ನು ಉರಿಯಿಂದ ಇಳಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬ್ರಿಂಜಾಲ್-ಕರ್ಡ್ಸ್ ಗ್ರೇವಿ ರೆಡಿ.