ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಡ ಮತ್ತು ಶೋಷಿತ ವರ್ಗಗಳನ್ನು ಪಕ್ಷದ ವೇದಿಕೆಗೆ ತರುವಂತೆ ರಾಜ್ಯ ಸಭೆ ಸದಸ್ಯರಿಗೆ ಕರೆ ನೀಡಿದರು.
ನೀವು ಯಾವುದೇ ರಾಜ್ಯದಿಂದ ಬಂದಿದ್ದರೂ ಈ ವಿಷಯಗಳನ್ನು ಎತ್ತಬೇಕು. ಬಡ ಮತ್ತು ಶೋಷಿತ ವರ್ಗ ಸೇರಿದಂತೆ ಸಮಾಜದ ಎಲ್ಲಾ ವರ್ಗದ ಜನರು ಪಕ್ಷದ ಜತೆ ಸಹಯೋಗ ಹೊಂದುವಂತೆ ಮಾಡಬೇಕು ಎಂದು ಬಿಜೆಪಿ ರಾಜ್ಯಸಭೆ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಹೇಳಿದರು.
ಪಕ್ಷವು ಅವರಿಗೆ ವಿಶಿಷ್ಟ ಅಸ್ಮಿತೆಗೆ ವೇದಿಕೆ ಕಲ್ಪಿಸಿದ್ದು, ಹೊಸ ಕ್ಷೇತ್ರಗಳಿಂದ ಜನರನ್ನು ಪಕ್ಷದ ಮಡಿಲಿಗೆ ತರಬೇಕು ಎಂದು ಕೇಂದ್ರಸಚಿವ ರವಿ ಶಂಕರ್ ಪ್ರಸಾದ್ ತಿಳಿಸಿದರು.