Select Your Language

Notifications

webdunia
webdunia
webdunia
webdunia

'ಮಹಾ' ಮಳೆಗೆ ಕುಸಿದ ಸೇತುವೆ: ಎರಡು ಬಸ್ ಸೇರಿದಂತೆ 10ಕ್ಕೂ ಹೆಚ್ಚು ವಾಹನ ಕೊಚ್ಚಿ ಹೋದ ಶಂಕೆ

'ಮಹಾ' ಮಳೆಗೆ ಕುಸಿದ ಸೇತುವೆ:  ಎರಡು ಬಸ್ ಸೇರಿದಂತೆ 10ಕ್ಕೂ ಹೆಚ್ಚು ವಾಹನ ಕೊಚ್ಚಿ ಹೋದ ಶಂಕೆ
ಮುಂಬೈ , ಬುಧವಾರ, 3 ಆಗಸ್ಟ್ 2016 (11:03 IST)
ಮಹಾರಾಷ್ಟ್ರದ ರಾಯ್‌ಗಡ್ ಜಿಲ್ಲೆಯ ಮಹಾದ್ ನಗರದಿಂದ 5 ಕೀಲೋಮೀಟರ್ ಅಂತರದಲ್ಲಿ ಭಾರಿ ದುರಂತ ಸಂಭವಿಸಿದ್ದು ಹೆದ್ದಾರಿ ಸೇತುವೆ ಕುಸಿದು ಕನಿಷ್ಠ 22 ರಿಂದ 25 ಮಂದಿ ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಮುಂಬೈನಿಂದ 170ಕೀಲೋಮೀಟರ್ ದೂರದಲ್ಲಿ ಈ ಅವಘಡ ನಡೆದಿದೆ.


ಭಾರಿ ಮಳೆಯಿಂದ ಅಬ್ಬರಿಸಿ ಸುರಿಯುತ್ತಿರುವ ಮಳೆಗೆ ಸಾವಿತ್ರಿ ನದಿ ಅಪಾಯ ಮಟ್ಟ ಮೀರಿ ನಡೆಯುತ್ತಿದ್ದು ಮುಂಬೈ -ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ಕಟ್ಟಿದ್ದ ಸೇತುವೆ 80% ಕುಸಿದು ಹೋಗಿದೆ. ಮಂಗಳವಾರ- ಬುಧವಾರದ ನಡುವಿನ ರಾತ್ರಿ 2 ಗಂಟೆಗೆ ಈ ದುರ್ಘಟನೆ ನಡೆದಿದೆ. ಸೇತುವೆ ಕುಸಿತದಿಂದಾಗಿ 2 ಸರ್ಕಾರಿ ಬಸ್‌ಗಳು, ಹಲವು ಕಾರ್‌ಗಳು ಸೇರಿದಂತೆ 10ಕ್ಕೂ ಹೆಚ್ಚು ವಾಹನಗಳು ನದಿಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು 22 ರಿಂದ 25 ಜನರ ಸುಳಿವು ಸಿಗುತ್ತಿಲ್ಲ.

ರತ್ನಗಿರಿ ಮತ್ತು ಚಿಪ್ಲುನ್‌ನಿಂದ ಹೊರಟ ಮಹಾರಾಷ್ಟ್ರ ಸರ್ಕಾರಿ ಬಸ್‍ಗಳೆರಡು ನಾಪತ್ತೆಯಾಗಿದ್ದು, ಈ ಬಸ್‍ಗಳು ಸೇತುವೆ ಕುಸಿತದಿಂದ ಕೊಚ್ಚಿಹೋಗಿರಬಹುದು ಎಂದು ಹೇಳಲಾಗುತ್ತಿದೆ.

 ಸ್ಥಳಕ್ಕೆ ಎನ್‍ಡಿಆರ್‍ಎಫ್‌ನ ಎರಡು ಪಡೆ ದೌಡಾಯಿಸಿದೆದ್ದು ಹೆಲಿಕಾಫ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಸೇತುವೆ ಕುಸಿದಿರೋದ್ರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಉಂಟಾಗಿದ್ದು, ಮುಂಬೈ-ಗೋವಾ ಸಂಚಾರ ಅಸ್ತವ್ಯಸ್ತಗೊಂಡಿದೆ.

ಪ್ರವಾಹಕ್ಕೆ ಸೇತುವೆ ಕುಸಿದ ಪರಿಣಾಮ ಎರಡು ಸರ್ಕಾರಿ ಬಸ್ ಗಳು ಕೊಚ್ಚಿ ಹೋದ ಘಟನೆ ಮುಂಬೈ- ಗೋವಾ ಹೆದ್ದಾರಿಯಲ್ಲಿ ನಡೆದಿದೆ.

ಸ್ವತಃ ಮಹಾ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೇಲುಸ್ತುವಾರಿ ವಹಿಸಿ ಕಾರ್ಯಾಚರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಫಡ್ನವೀಸ್ ಬಳಿ ಚರ್ಚೆ ನಡೆಸಿದ್ದು ಕೇಂದ್ರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ರಾಜ್ಯಸಭೆಯಲ್ಲಿ ಜಿಎಸ್ ಟಿ ಮಸೂದೆ ಮಂಡನೆ