Select Your Language

Notifications

webdunia
webdunia
webdunia
webdunia

ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿತದಲ್ಲಿ ಲಾರಿ ಚಾಲಕ ಪರಾಗಿದ್ದೆ ಪವಾಡ ಸದೃಶ

ಕಾಳಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿತದಲ್ಲಿ ಲಾರಿ ಚಾಲಕ ಪರಾಗಿದ್ದೆ ಪವಾಡ ಸದೃಶ

Sampriya

ಕಾರವಾರ , ಬುಧವಾರ, 7 ಆಗಸ್ಟ್ 2024 (20:24 IST)
Photo Courtesy X
ಕಾರವಾರ: ಈಚೆಗೆ ಶಿರೂರಿನಲ್ಲಿ ನಡೆದ ಭೀಕರ ಗುಡ್ಡ ಕುಸಿತದ ಬೆನ್ನಲ್ಲೇ ಕಾರವಾರದ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಳಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಲಾರಿಯೊಂದು ಚಾಲಕನ ಸಮೇತ ನದಿಗೆ ಬಿದ್ದಿದ್ದು, ಅದೃಷ್ಟವಶಾತ್ ಕಾರು ಚಾಲಕನನನ್ನು ಮೀನುಗಾರರು ರಕ್ಷಿಸಿದ್ದಾರೆ.

ಕಾರವಾರ ಗೋವಾ ಸಂಪರ್ಕ ಮಾಡುವ ನಗರದ ಕೋಡಿಭಾಗ್ ಬಳಿ ಇರುವ ಈ ಸೇತುವೆ ಬುಧವಾರ ತಡರಾತ್ರಿ ಸುಮಾರು 12.30 ರ ವೇಳೆ ಕುಸಿದು ಬಿದ್ದಿದೆ

ಫಿಲ್ಲರ್ ಕಂಬಗಳ ನಡುವೆ ಸೇತುವೆ ಮೂರ್ನಾಲ್ಕು ಕಡೆ ತುಂಡಾಗಿ ನದಿಗೆ ಬಿದ್ದಿದ್ದು, ಇದೇ ವೇಳೆ ಗೋವಾದಿಂದ ಕಾರವಾರ ಕಡೆಗೆ ಆಗಮಿಸುತ್ತಿದ್ದ ಟ್ರಕ್ ನದಿಗೆ ಬಿದ್ದಿದ್ದು, ತಕ್ಷಣ ಮೀನುಗಾರರು ಹಾಗೂ ಪೋಲಿಸರು ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ (37) ಎಂಬುವವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾರವಾರ ಸದಾಶಿವಗಡ ಮಾರ್ಗದ ಹಳೆಯ ಕಾಳಿ ಸೇತುವೆ ಕುಸಿತವಾಗಿದ್ದು, ನದಿಗೆ ಬಿದ್ದ ಲಾರಿ ಚಾಲಕನನ್ನು ಮೀನುಗಾರರ ಸಹಾಯದಿಂದ ರಕ್ಷಿಸಿ,ಹೈವೇಯಲ್ಲಿ ಡೈವರ್ಶನ್ ಕೊಡಲಾಗಿದೆ. ಮುಂದಿನ ಆದೇಶದವರೆಗೆ ಈ ಮಾರ್ಗದ ಪ್ರಯಾಣವನ್ನು ತಪ್ಪಿಸಲು ವಿನಂತಿ.

Share this Story:

Follow Webdunia kannada

ಮುಂದಿನ ಸುದ್ದಿ

ಇವರೆಲ್ಲ ಪ್ಯಾರಿಸ್‌ಗೆ ಟ್ರಿಫ್‌ಗೆ ಹೋಗಿರುವುದ: ಐಒಎ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಸಿಎಂ ಭಗವಂತ್