Select Your Language

Notifications

webdunia
webdunia
webdunia
webdunia

ಮಧುಮಗಳ ಹೊಸ ಸ್ಟೈಲ್: ಲೆಹಂಗಾ ಬದಲು ಶಾರ್ಟ್ಸ್ ತೊಟ್ಟು ಮದುವೆಯಾದ ಸುಂದರಿ

Bride
ನವದೆಹಲಿ , ಶುಕ್ರವಾರ, 2 ಜೂನ್ 2017 (16:38 IST)
ನವದೆಹಲಿ: ಮದುಮಗಳು ಸಾಮಾನ್ಯವಾಗಿ ಗ್ರ್ಯಾಂಡ್ ಆಗಿರುವ ಸ್ಯಾರಿ ಇಲ್ಲವೇ ಲೆಹಂಗಾ ಹಾಕುವುದು. ಚಿನ್ನಾಭರಣಗಳಿಂದ ಅಲಂಕರಿಸಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಧುಮಗಳು ಚಡ್ಡಿಯಲ್ಲೇ ವಿವಾಹವಾಗಿ ಗಮನಸೆಳೆದಿದ್ದಾಳೆ. ಅದೂ ಲೆಹಂಗಾ ಬ್ಲೌಸ್ ಜತೆ ಶಾರ್ಟ್ಸ್ ಕಾಂಬಿನೇಷನ್.
 
ಇಂತದ್ದೊಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮದುಮಗಳು ಮದುವೆ ದಿನ ಗ್ರ್ಯಾಂಡ್ ಆಗಿರುವ ಲೆಹಂಗಾ ಬ್ಲೌಸ್ ಏನೊ ಹಾಕಿದ್ದಾಳೆ. ಆದರೆ ಲೆಹಂಗಾ ಸ್ಕರ್ಟ್ ಬದಲು ಸಾಮಾನ್ಯವಾದ ಶಾರ್ಟ್ಸ್ ಹಾಕಿ ಕ್ಯಾಮರಾಗೆ ಪೋಸು ನಿಡಿದ್ದಾಳೆ.
 
ಆದ್ರೆ ಮದುವೆ ಎಲ್ಲಿ ನಡೆದಿದೆ,  ವಧು ವರರ ಹೆಸರು ಏನು, ಮದುವೆ ಯಾವಾಗ ನಡೆದಿದೆ  ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ ಫೋಟೋ ಮಾತ್ರ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಫೋಟೋದಲ್ಲಿ ವರ ಜೊತೆ ನಿಂತಿದ್ದ ವಧು ಕೆಂಪು ಬಣ್ಣದ ಲೆಹೆಂಗಾ ಬ್ಲೌಸ್, ದುಪ್ಪಟ್ಟ ತೊಟ್ಟು, ಚಿನ್ನಾಭರಣಗಳನ್ನು ಧರಿಸಿ ಚೆನ್ನಾಗಿಯೇ ಮಿಂಚುತ್ತಿದ್ದಾಳೆ. ಆದ್ರೆ ಲೆಹೆಂಗಾ ಸ್ಕರ್ಟ್ ತೊಡುವ ಬದಲು ಶಾರ್ಟ್ಸ್ ಹಾಕಿರುವುದು ಮಾತ್ರ ಅಚ್ಚರಿ ಜತೆಗೆ ಕುತೂಹಲಕ್ಕೆ ಕಾರಣವಾಗಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸಚಿವೆ ಮನೇಕಾ ಗಾಂಧಿ ಆಸ್ಪತ್ರೆಗೆ ದಾಖಲು