Select Your Language

Notifications

webdunia
webdunia
webdunia
webdunia

ಕಾಲೇಜಿಗೆ ಬರಬೇಕೆಂದರೆ ಬಾಯ್ ಫ್ರೆಂಡ್ ಕಡ್ಡಾಯ

Boy friend
ಬೆಂಗಳೂರು , ಶುಕ್ರವಾರ, 13 ಜನವರಿ 2017 (10:21 IST)
ಕಾಲೇಜಿಗೆ ಬರಬೇಕೆಂದರೆ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಬಾಯ್ ಫ್ರೆಂಡ್ ಹೊಂದಿರಬೇಕು, ಇದು ಬೆಂಗಳೂರಿನ ಆರ್.ವಿ. ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಕಂಡು ಬಂದ ನೋಟಿಸ್.
ಕೆಲ ಪುಂಡ ವಿದ್ಯಾರ್ಥಿಗಳು ಈ ಕೃತ್ಯವನ್ನೆಸಗಿದ್ದು, ಆರ್. ವಿ. ಕಾಲೇಜ್ ಲೆಟರ್ ಹೆಡ್ ಹೊಂದಿರುವ ನೋಟಿಸ್‌ನಲ್ಲಿ ಪ್ರಾಚಾರ್ಯರ ನಕಲಿ ಸಹಿ ಇದೆ. 
 
ಎಲ್ಲಾ ವಿದ್ಯಾರ್ಥಿನಿಯರು ತಮ್ಮ ಹಿತದೃಷ್ಟಿಯಿಂದ ಫೆಬ್ರವರಿ 14(ಪ್ರೇಮಿಗಳ ದಿನ) ರೊಳಗೆ ಕಡ್ಡಾಯವಾಗಿ ಬಾಯ್ ಫ್ರೆಂಡ್ ಹೊಂದಿರಬೇಕು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
 
ಈ ಕುರಿತು ಕಾಲೇಜಿನ ಆಡಳಿತ ಮಂಡಳಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದೆ.
 
ಕೆಲ ತಿಂಗಳ ಹಿಂದೆ ಮಣಿಪಾಲ್ ವಿಶ್ವವಿದ್ಯಾಲಯದ ಹೆಸರಲ್ಲಿ ಕೆಲ ಪುಂಡ ವಿದ್ಯಾರ್ಥಿಗಳು ಇದೇ ರೀತಿಯಲ್ಲಿ ನೋಟಿಸ್ ಹಾಕಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ರಾಮ್ ವಿಲಾಸ್ ಪಾಸ್ವಾನ್