Publish Date: Fri, 26 Feb 2021 (10:01 IST)
Updated Date: Fri, 26 Feb 2021 (10:05 IST)
ಕುರುಕ್ಷೇತ್ರ : ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಹೋಟೆಲ್ ವೊಂದರಲ್ಲಿ 12ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಐವರು ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ನಡೆದಿದೆ.
ಸಂತ್ರಸ್ತೆ ಇಂಗ್ಲೀಷ್ ಸ್ಪೀಕಿಂಗ್ ಕ್ಲಾಸ್ ಗೆ ಹೋಗುತ್ತಿದ್ದಳು. ಅವಳು ಸ್ನೇಹಿತನ ಮನೆಗೆ ಹೋದಾಗ ಅಲ್ಲಿ ಆಕೆಗೆ ತಲೆ ತಿರುಗಿದ ಹಿನ್ನಲೆಯಲ್ಲಿ ಸ್ನೇಹಿತ ಆಕೆಯನ್ನು ಹೋಟೆಲ್ ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿದ್ದ ಆರೋಪಿಗಳು ಸೇರಿ ಮಾನಭಂಗ ಎಸಗಿದ್ದಾನೆ.
ಆಕೆಯ ತರಗತಿಯ ಶಿಕ್ಷಕಿ ಆಕೆ ಕ್ಲಾಸ್ ಗೆ ಬಂದಿಲ್ಲ ಎಂದು ತಿಳಿಸಿದ ಹಿನ್ನಲೆಯಲ್ಲಿ ಮನೆಯವರು ಹುಡುಕಾಡಿದಾಗ ಸಂತ್ರಸ್ತೆ ಆರೋಪಿಗಳ ಜೊತೆ ಕಾಣಿಸಿದ್ದಾಳೆ. ಈ ಹಿನ್ನಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಕಾರಣ ಪೊಲೀಸರು ಮೂವರನ್ನು ಬಂಧಿಸಿದ್ದಾರೆ, ಉಳಿದವರನ್ನು ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದ್ದಾರೆ.