ನವದೆಹಲಿ: ದೇಶದಲ್ಲಿ ಈಚೆಗೆ ಶಾಲೆ, ಕಾಲೇಜು ಹಾಗೂ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇಮೇಲ್ ಪತ್ರಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಒಂದೇ ಇ ಮೇಲ್ ಅಕೌಂಟ್‌ನಿಂದ ಒಂದು ವಾರದಲ್ಲಿ 46 ವಿಮಾನಗಳಿಗೆ ಬೆದರಿಕೆ ಪತ್ರಗಳು ಬಂದಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸುಮಾರು ಶೇ 70 ರಷ್ಟು ಒಂದೇ ಮೂಲದಿಂದ ಬಾಂಬ್ ಬೆದರಿಕೆಗಳು ಬಂದಿದೆ. ಪರಿಶೀಲಿಸಿದಾಗ ಅನಾಮದೇಯ ಎಕ್ಸ್‌ನಿಂದ ಬೆದರಿಕೆಗಳು ಬಂದಿರುವುದು ತಿಳಿದುಬಂದಿದೆ.
ಹ್ಯಾಂಡಲ್ - @adamlanza1111 ಐಡಿಯಿಂದ ಶುಕ್ರವಾರ ರಾತ್ರಿ 12ಬೆದರಿಕೆಗಳು ಹಾಗೂ ಶನಿವಾರ 34 ಬೆದರಿಕೆಗಳು ಬಂದಿದೆ. ಅದಲ್ಲದೆ ಬಳಕೆದಾರರು ಅಮೇರಿಕನ್ ಏರ್‌ಲೈನ್ಸ್, ಜೆಟ್ ಬ್ಲೂ ಮತ್ತು ಏರ್ ನ್ಯೂಜಿಲೆಂಡ್‌ನಂತಹ ಅಂತರರಾಷ್ಟ್ರೀಯ ವಿಮಾನಗಳಿಗೂ ಬೆದರಿಕೆಯನ್ನು ಹಾಕಿ ಪೋಸ್ಟ್ ಮಾಡಿದೆ.
ಏರ್ ಇಂಡಿಯಾ, ವಿಸ್ತಾರಾ, ಇಂಡಿಗೋ, ಆಕಾಶ ಏರ್, ಅಲಯನ್ಸ್ ಏರ್, ಸ್ಪೈಸ್ ಜೆಟ್ ಮತ್ತು ಸ್ಟಾರ್ ಏರ್ ಸೇರಿವೆ. ಸ್ಟಾರ್ ಏರ್ ತನ್ನ ನಾಲ್ಕು ವಿಮಾನಗಳಿಗೆ ಬೆದರಿಕೆಗಳನ್ನು ಸ್ವೀಕರಿಸಿದರೆ, ಇತರರು ತಲಾ ಐದು ವಿಮಾನಗಳಿಗೆ ಇದೇ ರೀತಿಯ ಸಂದೇಶಗಳನ್ನು ಪಡೆದರು.
ಪೋಸ್ಟ್‌ಗಳು ಒಂದೇ ರೀತಿಯ ಸಂದೇಶವನ್ನು ಹೊಂದಿದ್ದವು: 'ನಿಮ್ಮ ಐದು ವಿಮಾನಗಳಲ್ಲಿ ಬಾಂಬ್‌ಗಳಿವೆ ಯಾರೂ ಜೀವಂತವಾಗಿ ಉಳಿಯುವುದಿಲ್ಲ. ಕೂಡಲೇ ವಿಮಾನದ ದಿಕ್ಚೂಚಿ ಬದಲಾಯಿಸಿ' ಎಂದು ಬೆದರಿಕೆಯೊಡ್ಡಲಾಗಿದೆ.