Select Your Language

Notifications

webdunia
webdunia
webdunia
webdunia

ಕೇರಳದ ಮಲ್ಲಪುರಂನಲ್ಲಿ ಬಾಂಬ್ ಸ್ಫೋಟ

ಕೇರಳದ ಮಲ್ಲಪುರಂನಲ್ಲಿ ಬಾಂಬ್ ಸ್ಫೋಟ
ಮಲ್ಲಪುರಂ , ಮಂಗಳವಾರ, 1 ನವೆಂಬರ್ 2016 (15:05 IST)
ಕೇರಳದ ಮಲ್ಲಪುರಂ ಕಲೆಕ್ಟರೇಟ್‌ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು. ಪಾರ್ಕಿಂಗ್‌ನಲ್ಲಿದ್ದ ಮೂರು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪಾರ್ಕ್ ಮಾಡಲಾಗಿದ್ದ ಕಾರೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳದಲ್ಲಿ ಬ್ರೀಫ್ ಕೇಸ್ ಪತ್ತೆಯಾಗಿದೆ.
 
ಬಾಂಬ್ ಸ್ಫೋಟದ ಹೊಣೆಯನ್ನು ಅಲ್ ಉಮ್ಮಾ ಸಂಘಟನೆಯ ಕೈವಾಡವಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.
 
ಬಾಂಬ್ ಸ್ಫೋಟದಿಂದ ಯಾವುದೇ ಹಾನಿಯಾಗಿಲ್ಲ. ಸಾವು ನೋವುಗಳು ಸಂಭವಿಸಿಲ್ಲ. ಇದೊಂದು ಕಡಿಮೆ ತೀವ್ರತೆಯ ಸ್ಫೋಟ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀನಿವಾಸ್‌ಪ್ರಸಾದ್‌ ಬಿಜೆಪಿಗೆ ಸೇರಿದ್ರೆ, ಬಂಗಾರಪ್ಪನವರ ಗತಿಯೇ ಆಗುತ್ತದೆ: ದೇವೇಗೌಡ