ಆದಾಯ ಘೋಷಣೆ ಯೋಜನೆಯಡಿ ಆಘೋಷಿತ ಆದಾಯ ಮತ್ತು ಆಸ್ತಿಯ ಒಟ್ಟು 65,250 ಕೋಟಿ ರೂಪಾಯಿ ಕಪ್ಪು ಹಣವನ್ನು ಘೋಷಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಎಸ್‌ಬಿಸಿ ಪಟ್ಟಿಯ ಹೊರತಾಗಿ 8000 ಕೋಟಿ ರೂಪಾಯಿ ಘೋಷಿಸಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದರಿಂದ ಕಪ್ಪು ಹಣ ಘೋಷಿಸಿದ ಮೊತ್ತದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಆದಾಯ ತೆರಿಗೆ ಘೋಷಣೆ ಯೋಜನೆಯಡಿ ಕಪ್ಪು ಹಣ ಹೊಂದಿದವರು ಈಗಾಗಲೇ 64,275 ಕೋಟಿ ರೂಪಾಯಿಗಳ ಹಣ ಹೊಂದಿರುವುದಾಗಿ ಘೋಷಿಸಿದ್ದಾರೆ. ಕಪ್ಪು ಹಣವನ್ನು ದೇಶದ ಅಭಿವೃದ್ಧಿಗಾಗಿ ಬಳಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಕಪ್ಪು ಹಣ ಹೊಂದಿದವರು ಶೇ.45 ರಷ್ಟು ತೆರಿಗೆಯನ್ನು ಪಾವತಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ. ಕೇಂದ್ರ ಸರಕಾರ ನೀಡಿದ ಭರವಸೆಯಂತೆ ಕಪ್ಪು ಹಣ ಹೊಂದಿದವರಿಗೆ ಶಿಕ್ಷೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಪ್ಪು ಹಣ ಹೊಂದಿದವರು ಮಾರ್ಚ್ 2017, ಸೆಪ್ಟೆಂಬರ್ 2017 ತಿಂಗಳೊಳಗೆ ಹಂತ ಹಂತವಾಗಿ ತೆರಿಗೆಯನ್ನು ಪಾವತಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ