Select Your Language

Notifications

webdunia
webdunia
webdunia
webdunia

ಕಪ್ಪು ಹಣದ ವಿರುದ್ಧ ಹೋರಾಟ ಮಾಡಿದ್ದ ಬಿಜೆಪಿ ಮುಖಂಡ ಖೋಟಾನೋಟು ದಂಧೆಯಲ್ಲಿ ಸಿಕ್ಕಿಬಿದ್ದ..!

ಕಪ್ಪು ಹಣದ ವಿರುದ್ಧ ಹೋರಾಟ ಮಾಡಿದ್ದ ಬಿಜೆಪಿ ಮುಖಂಡ ಖೋಟಾನೋಟು ದಂಧೆಯಲ್ಲಿ ಸಿಕ್ಕಿಬಿದ್ದ..!
ತ್ರಿಶೂರ್ , ಶುಕ್ರವಾರ, 23 ಜೂನ್ 2017 (13:17 IST)
ಇದನ್ನೇ ನೋಡಿ ವಿಪರ್ಯಾಸ ಎನ್ನುವುದು. ಕಪ್ಪುಹಣದ ವಿರುದ್ಧ ಬೀದಿ ಬೀದಿಯಲ್ಲಿ ಪೋಸ್ಟರ್ ಅಂಟಿಸಿ ಚಳುವಳಿ ಮಾಡಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡನೇ ನಕಲಿ ನೋಟು ಪ್ರಿಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ತ್ರಿಶೂರ್`ನ ಬಿಜೆಪಿ ಮುಖಂಡ ಎರಶೇರಿ ರಾಕೇಶ್ ಎಂಬುವವನ್ನ ಬಂಧಿಸಿರುವ ಪೊಲೀಸರು 1.5 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಂಡಿದ್ದಾರೆ. ಶ್ರೀನಾರಾಯಣಪುರಂನ ಈತನ ಮನೆಯಲ್ಲಿ ನೋಟ್ ಪ್ರಿಂಟ್ ಮಾಡುತ್ತಿದ್ದ ಮೆಶಿನ್ ಸಹ ಪತ್ತೆಯಾಗಿದೆ. ಈತ ಸ್ಥಳೀಯ ಪಂಚಾಯತ್ ಸಮಿತಿಯ ಸದಸ್ಯನೂ ಆಗಿದ್ದಾನೆ. ರಾಕೇಶ್ ಮತ್ತು ಆತನ ಸಹೋದರ ರಾಜೇಶ್`ನನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ.
.
ಈತನ ಸಹೋದರ ರಾಜೇಶ್ ಸಹ ೀ ದಂಧೆಯಲ್ಲಿ ತೊಡಗಿದ್ದು, ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ. ಆತನ ಮನೆಯಲ್ಲೂ ನೋಟ್ ಪ್ರಿಂಟ್`ಗೆ ಬಳಸುತ್ತಿದ್ದ ಇಂಕ್, ಪೇಪರ್, ಮೇಸಿನ್`ಗಳು ಸಿಕ್ಕಿವೆ. ವಶಪಡಿಸಿಕೊಂಡಿರುವ ನಕಲಿ ನೋಟುಗಳು 2000, 100, 50, 20 ರೂ. ಮುಖಬೆಲೆಯ ನೋಟುಗಳಾಗಿವೆ.

ಅಸಲಿ ನೋಟುಗಳನ್ನೇ ಹೋಲುವ ರೀತಿ ಈ ನಕಲಿ ನೋಟು ತಯಾರಿಸಲಾಗಿದ್ದು, ಗುರುತಿಸುವುದು ಕಷ್ಟ ಸಾಧ್ಯವಾಗಿದೆ. ಬಾರ್ ಮತ್ತು ಪೆಟ್ರೋಲ್ ಬಂಕ್`ಗಳಲ್ಲಿ ಮಾತ್ರ ಈ ನೋಟುಗಳನ್ನ ಬಳಸುತ್ತಿದ್ದರು. ಒಟ್ಟೊಟ್ಟಿಗೆ ನೂರಾರು ನೊಟುಗಳ ಬದಲಾವಣೆ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಬಗ್ಗೆ ಸಹೋದರರ ಜಾಡು ಹಿಡಿದ ಪೊಲೀಸರು ಅಸಲಿ ಮುಖ ಬಯಲಿಗೆ ಎಳೆದಿದ್ಧಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ನವದೆಹಲಿ

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ: ಜಿ.ಪರಮೇಶ್ವರ್