ಲಕ್ನೋ : ಉತ್ತರ ಪ್ರದೇಶದ ಚುನಾವಣೆಯಲ್ಲಿ ಸತತ ಎರಡನೇ ಬಾರಿ ಗೆದ್ದು ಅಧಿಕಾರಕ್ಕೆ ಏರಿದ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಭರ್ಜರಿ ಜಯಗಳಿಸಿದೆ.
ಒಟ್ಟು 36 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 33, ಪಕ್ಷೇತರ 2, ಜೆಎಸ್ಡಿ ಒಂದು ಸ್ಥಾನದಲ್ಲಿ ಜಯಗಳಿಸಿದೆ. ವಿರೋಧ ಪಕ್ಷವಾದ ಎಸ್ಪಿ ಜೊತೆ ಬಿಎಸ್ಪಿ, ಕಾಂಗ್ರೆಸ್ ಶೂನ್ಯ ಸಂಪಾದಿಸಿದೆ.
ಬಿಜೆಪಿ ಜಯಗಳಿಸಿದ್ದರೂ ವಾರಣಾಸಿ ಕ್ಷೇತ್ರದಲ್ಲಿ ಸೋತಿದೆ. ಜೈಲಿನಲ್ಲಿರುವ ಮಾಫಿಯಾ ಡಾನ್ ಬ್ರಿಜೇಶ್ ಸಿಂಗ್ ಪತ್ನಿ ಅನುಪಮಾ ಸಿಂಗ್ ಸತತ ಎರಡನೇ ಬಾರಿ ಜಯಗಳಿಸಿದ್ದಾರೆ.